Home ಧಾರ್ಮಿಕ ಕಾರ್ಯಕ್ರಮ ಆಟಿ ಅಮಾವಾಸ್ಯೆ: ಸಂಗಮದಲ್ಲಿ ಭಕ್ತರ ತೀರ್ಥಸ್ನಾನ

ಆಟಿ ಅಮಾವಾಸ್ಯೆ: ಸಂಗಮದಲ್ಲಿ ಭಕ್ತರ ತೀರ್ಥಸ್ನಾನ

1580
0
SHARE
ಭಕ್ತರು ದೇವರ ಪ್ರಸಾದ ಸ್ವೀಕರಿಸಿದರು.

ಉಪ್ಪಿನಂಗಡಿ: ಆಟಿ ಅಮಾವಾಸ್ಯೆ ದಿನವಾದ ಆಗಸ್ಟ್‌ 1ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ನದಿ ತಟದಲ್ಲಿ, ಸಂಗಮ ಸ್ನಾನ ಘಟ್ಟದಲ್ಲಿ ಸಾವಿರಾರು ಮಂದಿ ಭಕ್ತರು ತೀರ್ಥ ಸ್ನಾನ ಮಾಡಿ ಬಳಿಕ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಬೆಳಗ್ಗೆ 6 ಗಂಟೆಯಿಂದಲೇ ಮಹಾಕಾಳಿ ದೇಗುಲದ ಬಳಿಯಲ್ಲಿ ಜಮಾಯಿಸಿದ ಭಕ್ತರು ಸರತಿ ಸಾಲಿನಲ್ಲಿ ತೆರಳಿ, ಸಂಗಮ ಸ್ನಾನ ಘಟ್ಟದಲ್ಲಿ ಮಿಂದು ತೀರ್ಥ ಸ್ನಾನ ಮಾಡಿದರು. ಬಳಿಕ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರೆವೇರಿಸಿದರು. ಮಧ್ಯಾಹ್ನದ ತನಕ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ನೆರವೇರಿಸಿ ಪುನೀತರಾದರು. ದೇವಸ್ಥಾನದ ವತಿಯಿಂದ ದೇಗುಲಕ್ಕೆ ಬಂದ ಭಕ್ತರಿಗೆ ಶುಂಠಿ ಮತ್ತು ಕರಿ ಮೆಣಸು ಮೂಲಕ ಮಾಡಿದ ಕಸಾಯ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ್‌, ಸಹಾಯಕ ಕೃಷ್ಣ ಪ್ರಸಾದ್‌ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಪಿಂಡ ಪ್ರದಾನ
ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಈ ಸಂಗಮ ಕ್ಷೇತ್ರ ಪಿಂಡ ಪ್ರಧಾನ ಕ್ಷೇತ್ರ ಎಂಬ ಪ್ರತೀತಿ ಪಡೆದಿದ್ದು, ಆಟಿ ಅಮಾವಾಸ್ಯೆ ವಿಶೇಷ ದಿನವಾ ದಂದು ಅತ್ಯಧಿಕ ಸಂಖ್ಯೆಯಲ್ಲಿ ಪಿಂಡ ಪ್ರದಾನ ನಡೆಯಿತು. ಸುಮಾರು 150ಕ್ಕೂ ಅಧಿಕ ಮಂದಿ ಪಿಂಡ ಪ್ರದಾನ ಕಾರ್ಯ ನೆರವೇರಿಸಿದರು.

ಪಿಂಡ ಪ್ರದಾನ-ಪಿತೃ ತರ್ಪಣ
ಉಪ್ಪಿನಂಗಡಿ:
ಆಷಾಢ ಅಮವಾಸ್ಯೆಯ ಗುರುವಾರದಂದು ಉಪ್ಪಿನಂಗಡಿಯ ನೇತ್ರಾವತಿ ಕುಮಾರ ಧಾರಾ ನದಿ ಸಂಗಮ ತಟದಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸಹಸ್ರಾರು ಭಕ್ತರು ಪಿಂಡ ಪ್ರದಾನ-ಪಿತೃ ತರ್ಪಣಗೈದು ಗತಿಸಿದ ಹಿರಿಯರಿಗೆ ಮೋಕ್ಷಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.ಮುಂಜಾನೆಯಿಂದಲೇ ದೇವಾಲ ಯಕ್ಕೆ ಆಗಮಿಸಿದ ಭಾರೀ ಸಂಖ್ಯೆಯ ಭಕ್ತರು ನೇತ್ರಾವತಿ ನದಿಯಲ್ಲಿ ಮಿಂದು ತರ್ಪಣಗೈದರು. ಬಹಳಷ್ಟು ಮಂದಿ ಅರ್ಚಕರ ಮುಖೇನ ಪಿಂಡ ಪ್ರದಾನ ಹಾಗೂ ತಿಲಹೋಮಾದಿ ಕಾರ್ಯಗಳನ್ನು ಮಾಡಿ ಗತಿಸಿದ ಬಂಧುಗಳಿಗೆ ಮೋಕ್ಷ ಬಯಸಿದರು.ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಂದರ್ಭ ದೇವಾಲಯದಲ್ಲಿ ಭಕ್ತಸಂದಣಿ ಹೆಚ್ಚಾಗಿತ್ತು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಮ್ಯಾನೇಜರ್‌ ವೆಂಕಟೇಶ್‌ ಭಟ್, ಸಿಬಂದಿ ಪದ್ಮನಾಭ ,ದಿವಾಕರ, ಪ್ರಸಾದ್‌ ಭಕ್ತರ ಅನುಕೂಲತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದರು.

LEAVE A REPLY

Please enter your comment!
Please enter your name here