ಉಪ್ಪಿನಂಗಡಿ : ಇಲ್ಲಿನ ನೇತ್ರಾವತಿ ಕಾರು ಚಾಲಕ-ಮಾಲಕರ ಸಂಘ, ರಿಕ್ಷಾ ಚಾಲಕ ಮಾಲಕ ಸಂಘ, ಸರಕಾರಿ ಬಸ್ಸು ಖಾಸಗಿ ಬಸ್ಸುಗಳ ಚಾಲಕರ ಸಹಕಾರದೊಂದಿಗೆ ವರ್ಷಾವಧಿ ಕಟ್ಟೆ ಪೂಜಾ ಕಾರ್ಯಕ್ರಮವು ಹೊಸ ಬಸ್ ನಿಲ್ದಾಣದ ಮುಂಭಾಗದ ಅಶ್ವತ್ಥ ಕಟ್ಟೆಯಲ್ಲಿ ನಡೆಯಿತು.
ಶ್ರೀ ಸಹಸ್ರಲಿಂಗೇಶ್ವರ ದೇವರ ಆರಾಟ ಉತ್ಸವದ ಅಂಗವಾಗಿ ಮುಂಜಾನೆ ಗಣಹೋಮ ಮೂಲಕ ಆರಂಭಗೊಂಡು ರಾತ್ರಿ ಒಂಭತ್ತಕ್ಕೆ ಶ್ರೀ ದೇವರ ಕಟ್ಟೆ ಪೂಜೆ
ವಿಧಿವಿಧಾನದಂತೆ ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ವಿ. ದಯಾನಂದ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.
ಶ್ರೀ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಲಿಮಾರ್ ರಘುನಾಥ ರೈ, ಸದಸ್ಯರಾದ ಪ್ರಕಾಶ ರೈ, ಡಾ| ರಾಜರಾಮ, ಸೋಮನಾಥ ಆರ್ತಿಲ, ಕೃಷ್ಣ ರಾವಿ, ರಾಧಾಕೃಷ್ಣ ನಾಯಕ್, ಶ್ರೀ ದೇವಳದ ಕಾರ್ಯ ನಿರ್ವಹಣಾಧಿಕಾರಿ ಹರಿಶ್ಚಂದ್ರ, ವ್ಯವಸ್ಥಾಪಕ ವೆಂಕಟೇಶ್ ರಾವ್, ಗಣ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಕರುಣಾಕರ ಸುವರ್ಣ, ಸುಧಾಕರ ಶೆಟ್ಟಿ, ಹೊನ್ನಪ್ಪ, ಗೋಪಾಲ ಹೆಗ್ಡೆ ಎನ್. ಸೇರಿದಂತೆ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.