ಉಪ್ಪಿನಂಗಡಿ : ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸಾಮೂಹಿಕ ಚೂಡಿ ಪೂಜೆ ಕಾರ್ಯಕ್ರಮ ರವಿವಾರ ನಡೆಯಿತು.
ಸಮಾಜದ ಹಿರಿಯ ಗೃಹಿಣಿ ಶಾಂತಾ ನಿರುಪಮಾ ಮಾಧವ ಭಟ್ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ, ಚಾಲನೆ ನೀಡಿದರು. ದೇವಸ್ಥಾನದ ಅರ್ಚಕ ಸಂದೀಪ್ ಭಟ್ ಹಾಗೂ ರಮೇಶ್ ಭಟ್ ಮಾರ್ಗದರ್ಶನ ನೀಡಿದರು.
ದೇವ ಸ್ಥಾ ನದ ಮೊಕ್ತೇಸರರಾದ ದೇವಿದಾಸ ಭಟ್, ಯು. ನಾಗರಾಜ್ ಭಟ್, ಪ್ರಮುಖರಾದ ಸುರೇಶ್ ಪೈ, ಮಹಿಳಾ ಮಂಡಳಿಯ ಪ್ರಮುಖರಾದ ಪೂಜಾ ಪ್ರಭು, ಪ್ರಭಾ ಜಿ. ನಾಯಕ್, ನಂದಿತಾ ಎಸ್. ಭಟ್, ಭಾರತಿ ಪಡಿಯಾರ್, ವೀಣಾ ಮಲ್ಯ, ವೃಂದಾ ಪೈ, ಗಾಯತ್ರಿ ಪ್ರಭು, ಅನುರಾಧಾ ಪಡಿಯಾರ್, ರೇಖಾ ಎಂ. ಭಟ್, ಜಯಲಕ್ಷ್ಮೀ ನಾಯಕ್, ಅರ್ಚನಾ ಭಟ್, ಪ್ರಿಯಾ ಪ್ರಭು, ಪ್ರತಿಭಾ ಪೈ, ವಿದ್ಯಾ ಜಿ. ಮೊದಲಾದವರು ಭಾಗವಹಿಸಿದ್ದರು.
ದೇವಸ್ಥಾನದ ವ್ಯವಸ್ಥಾಪಕ ರಾಮಕೃಷ್ಣ ಪ್ರಭು ಹಾಗೂ ಮಂಜುನಾಥ ನಾಯಕ್ ಸಹಕರಿಸಿದರು.