ಉಪ್ಪಿನಂಗಡಿ : ಇಲ್ಲಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದಲ್ಲಿ ಕದಿರು (ತೆನೆ) ಪೂಜೆ ಬುಧವಾರ ನೆರವೇರಿತು. ಉಪ್ಪಿನಂಗಡಿ ಶಾಲೆ ಬಳಿಯ ಅಶ್ವಥ ಕಟ್ಟೆಯಲ್ಲಿ ಪೂಜಿಸಲಾದ ಕದಿರನ್ನು ಬೆಳ್ಳಿ ಪಲ್ಲಕಿಯಲ್ಲಿ ವಾದ್ಯ ಘೋಷ ಬಿರುದಾವಳಿಯೊಂದಿಗೆ ದೇವಸ್ಥಾನಕ್ಕೆ ತಂದು, ಭಕ್ತರಿಗೆ ವಿತರಿಸಲಾಯಿತು. ಬೆಳ್ಳಿ ಕವಚ ಹೊದಿಸಿದ ದೇವಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ದೇವ ಸ್ಥಾನಕ್ಕೆ ತರಲಾಯಿತು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ್ ಶೆಣೈ, ಸದಸ್ಯರಾದ ದೇವಿದಾಸ್ ಭಟ್ ಗಣ್ಯರಾದ ದೇವಾನಂದ ಶೆಣೈ, ಯು. ಕೃಷ್ಣ ಭಟ್, ಶ್ರೀನಿವಾಸ ಪೈ, ಶ್ರೀನಿವಾಸ ಪಡಿಯಾರ್, ದಾಮೋದರ ಪ್ರಭು, ರಾಜೇಶ್ ಪ್ರಭು, ರಾಮಕೃಷ್ಣ ಪ್ರಭು, ಮಂಜುನಾಥ ನಾಯಕ್, ಪ್ರದೀಪ್ ನಾಯಕ್, ನರಸಿಂಹ ಪಡಿಯಾರ್, ಹರೀಶ್ ಪೈ ಉಪಸ್ಥಿತರಿದ್ದರು.