Home ಧಾರ್ಮಿಕ ಸುದ್ದಿ ಉಪಿನಂಗಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನ: ತೆನೆ ಹಬ್ಬದ ಸಂಭ್ರಮ

ಉಪಿನಂಗಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನ: ತೆನೆ ಹಬ್ಬದ ಸಂಭ್ರಮ

300
0
SHARE

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ತೆನೆ ಹಬ್ಬ
ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷ ಶ್ರೀ ದೇವರ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಹೊತ್ತೂಯ್ದು ಸ್ಥಳೀಯ ಶಾಲಾ ವಠಾರದ ಅಶ್ವತ್ಥ ಕಟ್ಟೆಯಲ್ಲಿ ಭತ್ತದ ತೆನೆ ತಂದು ಇರಿಸಿ ಪೂಜೆ ನಡೆಸಿ ಬಳಿಕ ರಥಬೀದಿ ಮೂಲಕ ದೇವಸ್ಥಾನದಲ್ಲಿ ವಿತರಿಸುವುದು ವಾಡಿಕೆ. ಆದರೆ ಈ ಬಾರಿ ಆಡಳಿತ ಮಂಡಳಿ ಶ್ರೀ ದೇವಸ್ಥಾನದ ರಾಜಾಂಗಣದಲ್ಲಿ ಭತ್ತದ ಪೈರು ನಾಟಿ ಮಾಡುವ ಮೂಲಕ ಯಾವುದೇ ಭಕ್ತರಿಗೂ ತೆನೆ ಕಡಿಮೆಯಾಗದಂತೆ ಬೇಡಿಕೆಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಿದೆ.

ದೇವಸ್ಥಾನದ ಆಡಳಿತ ಮೊಕ್ತೇಸರ ಬೇಕಲ್‌ ಗಣೇಶ ಶೆಣೈ, ಮೊಕ್ತೇಸರರಾದ ಯು. ನಾಗರಾಜ ಭಟ್‌, ದೇವಿದಾಸ ಭಟ್‌, ಸಮಾಜ ಬಾಂಧವರಾದ ಉಪೇಂದ್ರ ಪೈ, ಶಾಂತಾರಾಮ ಶೆಣೈ, ಪ್ರದೀಪ್‌ ನಾಯಕ್‌, ಎಂ. ಗಣೇಶ ಭಟ್‌, ರವೀಂದ್ರ ಪ್ರಭು ನಿಡ್ಡೋಡಿ, ಜಗದೀಶ್‌ ನಾಯಕ್‌, ಶ್ರೀನಿವಾಸ ಪಡಿಯಾರ್‌, ಕೃಷ್ಣ ಭಟ್‌ ಕೆ. ಮತ್ತಿತರರು ರಾಜಾಂಗಣದಲ್ಲಿ ಭತ್ತದ ಪೈರು ಕೊçದು ಪಲ್ಲಕ್ಕಿಯಲ್ಲಿ ಇಟ್ಟು ಬಳಿಕ ದೇವಸ್ಥಾನಕ್ಕೆ ತಂದರು.

ಅರ್ಚಕ ರವೀಂದ್ರ ಭಟ್‌ ಭಕ್ತರಿಗೆ ಪ್ರಸಾದ ರೂಪದಲ್ಲಿ ಅವುಗಳನ್ನು ವಿತರಿಸಿದರು. ವ್ಯವಸ್ಥಾಪಕರಾದ ರಾಮಕೃಷ್ಣ ಪ್ರಭು ಹಾಗೂ ಮಂಜುನಾಥ ನಾಯಕ್‌ ಸಹಕರಿಸಿದರು.

LEAVE A REPLY

Please enter your comment!
Please enter your name here