ಸುಳ್ಯ: ಕಾಂಚಿ ಮಠದ ಶ್ರೀ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಅಂಗವಾಗಿ ಸುಳ್ಯದ ಅರಂಬೂರಿನ ಭಾರದ್ವಾಜ ಆಶ್ರಮದ ಕಾಂಚಿ ವೇದಾವಿದ್ಯಾಲಯದಲ್ಲಿ ಉಪನಿಷತ್ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.
ವ್ಯವಸ್ಥಾಪಕ ರವಿಶಂಕರ ಭಾರದ್ವಾಜ್, ಶಿಕ್ಷಕ ವೆಂಕಟೇಶ ಶಾಸ್ತ್ರೀ, ದಿನೇಶ್ ಭಾರದ್ವಾಜ್, ನಾರಾಯಣ ಭಟ್ ಉಪಸ್ಥಿತರಿದ್ದರು. ಇಲ್ಲಿನ ಅಶ್ರಮಕ್ಕೆ ಎರಡು ಬಾರಿ ಭೇಟಿ ನೀಡಿದ್ದ ಶ್ರೀಗಳು ವೇದ ಪಾಠಶಾಲೆಯನ್ನು ಆರಂಭಿಸಿ, ನೂರಾರು ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿಸಿದ್ದಾರೆ. ಅವರ ದಿವ್ಯಾತ್ಮ ವೇದಜ್ಯೋತಿಯೊಂದಿಗೆ ಲೀನವಾಗಿ ಲೋಕವನ್ನು ಬೆಳಗಲಿ ಎಂದು ರವಿಶಂಕರ ಭಾರದ್ವಾಜ್ ನುಡಿನಮನ ಸಲ್ಲಿಸಿದರು.