Home ಧಾರ್ಮಿಕ ಕಾರ್ಯಕ್ರಮ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲ: ಸುತ್ತುಪೌಳಿ ಲೋಕಾರ್ಪಣೆ

ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲ: ಸುತ್ತುಪೌಳಿ ಲೋಕಾರ್ಪಣೆ

1465
0
SHARE

ತೆಕ್ಕಟ್ಟೆ (ಉಳ್ತೂರು): ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕೃತ ದೇಗುಲದ ಸುತ್ತುಪೌಳಿ ಲೋಕಾರ್ಪಣೆಯನ್ನು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳ್ತೂರು ಮೋಹನದಾಸ ಶೆಟ್ಟಿ ಕಟ್ಟೆಮನೆ, ಉಳ್ತೂರು ಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಚ್‌. ಸುರೇಂದ್ರ ಹೆಗ್ಡೆ, ದೇಗುಲದ ಅರ್ಚಕ ಯು. ಸೀತಾರಾಮ ಅಡಿಗ ಹಾಗೂ ಯು. ಚೆನ್ನಕೇಶವ ಅಡಿಗ ಮತ್ತು ದೇಗುಲದ ಜೀರ್ಣೋದ್ಧಾರ ಸಮಿತಿ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ನವೀಕೃತ ದೇಗುಲದ ಸುತ್ತುಪೌಳಿ ಲೋಕಾರ್ಪಣೆಯ ಸಲುವಾಗಿ ಶ್ರೀ ದೇವರಿಗೆ 108 ಬ್ರಹ್ಮಕಲಶಾಭಿಷೇಕ ಹಾಗೂ ಶತರುದ್ರಾಭಿಷೇಕವು ವೇ|ಮೂ| ಸುಬ್ರಹ್ಮಣ್ಯ ಅಡಿಗ ಅವರ ನೇತೃತ್ವದಲ್ಲಿ ವೇ|ಮೂ| ಬಾರಕೂರು ಹೃಷಿಕೇಶ ಬಾಯರಿ ಅವರ ಮಾರ್ಗದರ್ಶನದಲ್ಲಿ ಜರಗಿತು.

LEAVE A REPLY

Please enter your comment!
Please enter your name here