ಉಲ್ಲಂಜೆ : ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಭಕ್ತರ ನೆರವು ಹಾಗೂ ಕ್ಷೇತ್ರ ಸಾನ್ನಿಧ್ಯದ ಪಾವಿತ್ರತೆಯ ಜತೆಗೆ ಸಮಾಜ ಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಕ್ಷೇತ್ರ ಬೆಳಗಲು ಸಾಧ್ಯ ಎಂದು ಉಲ್ಲಂಜೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ ಹೇಳಿದರು.
ಅವರು ಮೇ 23 ರಂದು ಉಲ್ಲಂಜೆಯ ಕೊರಗಜ್ಜ, ಮಂತ್ರದೇವತೆ, ಚಾಮುಂಡೇಶ್ವರೀ ಗುಳಿಗ ಸನ್ನಿಧಿಯಲ್ಲಿ ವಾರ್ಷಿಕ ನೇಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರದ್ಧೆ ಮತ್ತು ಭಕ್ತಿಯ ಪೂಜೆ ಪುನಸ್ಕಾರದಿಂದ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ದೈವದ ಮಧ್ಯಸ್ಥಗಾರ ಉಮೇಶ್ ಬಂಗೇರ ಅವರನ್ನು ಸಮ್ಮಾನಿಸಲಾಯಿತು. ವಿಟuಲ ಪೂಜಾರಿ, ಯಶೋಧರ ಶೆಟ್ಟಿ, ಅಪ್ಪಿ ಪೂಜಾರ್ತಿ ಮತ್ತಿತರರಿದ್ದರು. ಪ್ರಕಾಶ್ ಆಚಾರ್ಯ ನಿರೂಪಿಸಿದರು.