ಉಳ್ಳಾಲ: ಶಿವಸಾನ್ನಿಧ್ಯ ಹಿಂದೂ ರುದ್ರಭೂಮಿ ಉಳ್ಳಾಲದಲ್ಲಿ ಅಶ್ವತ್ಥಕಟ್ಟೆಯ ಜೀರ್ಣೋದ್ಧಾರ, ಉಪನಯನ ಕಾರ್ಯಕ್ರಮಗಳು ಸಂಪನ್ನಗೊಂಡವು.
ಸಾರ್ವಜನಿಕ ಹಿಂದೂ ಸ್ಮಶಾನ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಅಬ್ಬಕ್ಕನಗರ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉಳ್ಳಾಲ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕರ್ ಕಿಣಿ, ವಿದ್ಯಾರಣ್ಯ ಕಲಾ ವೃಂದದ ಅಧ್ಯಕ್ಷ ಚೂಡಪ್ಪ ಉಳ್ಳಾಲ, ವಿಕ್ರಮ ಮಿತ್ರ ವೃಂದದ ಲಕ್ಷ್ಮಣ ಟೈಲರ್, ವಿದ್ಯಾಂಜನೇಯ ವ್ಯಾಯಾಮ ಶಾಲೆಯ ವಸಂತ ಉಳ್ಳಾಲ, ವಿಜಯ, ಪರಿಸರ ಪ್ರೇಮಿಗಳಾದ ಜೀತ್ ಮಿಲನ ರೋಚ್ ಮತ್ತು ನವೀನ್ ನಾಯಕ, ಜಾಗೃತ ಸೊಸೈಟಿಯ ಅಧ್ಯಕ್ಷ ರಘುರಾಮ್ ಬಲ್ಲಾಳ್, ಬಾಬು ಬಂಗೇರ, ಉದಯಕುಮಾರ್ ಆರ್.ಕೆ., ಉಳ್ಳಾಲ ಅರಣ್ಯ ಅಧಿಕಾರಿಗಳಾದ ರವಿಕುಮಾರ್, ಉದಯ ಗೋಳಿಯಡಿ, ಜಗದೀಶ್ ಗೋಳಿಯಡಿ, ಕಾನೂನು ಸಲಹೆಗಾರ ರವೀಂದ್ರರಾಜ್ ಉಳ್ಳಾಲ, ಓಂ ಶಕ್ತಿ ಸಂಘಟನೆಯ ದಿನೇಶ್ ಉಳ್ಳಾಲ, ಚಂದ್ರಶೇಖರ ಉಳ್ಳಾಲ, ಸತೀಶ್ ಬಂಡಿಕೊಟ್ಯ, ಸಂತೋಷ ಮಾರ್ಲ, ದಾಮೋದರ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.