Home ಧಾರ್ಮಿಕ ಸುದ್ದಿ ಉಳ್ಳಾಲ ಮೊಗವೀರಪಟ್ಣ : ಹಸಿರು ಹೊರೆಕಾಣಿಕೆ ಸಮರ್ಪಣೆ

ಉಳ್ಳಾಲ ಮೊಗವೀರಪಟ್ಣ : ಹಸಿರು ಹೊರೆಕಾಣಿಕೆ ಸಮರ್ಪಣೆ

1466
0
SHARE

ಉಳ್ಳಾಲ : ಉಳ್ಳಾಲ ಮೊಗವೀರಪಟ್ಣ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್‌ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಉಳ್ಳಾಲದ ಭಾರತ್‌ ಪ್ರೌಢಶಾಲೆಯ ವಠಾರದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಉದ್ಯಮಿ ಸುದೇಶ್‌ ಮರೋಳಿ ಹೊರೆಕಾಣಿಕೆ ಉದ್ಘಾಟಿಸಿದರು.

ಮೆರವಣಿಗೆ ಭಾರತ್‌ ಪ್ರೌಢಶಾಲೆ, ಉಳ್ಳಾಲ ಮುಖ್ಯರಸ್ತೆ, ಶ್ರೀ ಶಾರದಾ ನಿಕೇತನ ರಸ್ತೆ, ಉಳ್ಳಾಲ ಮೊಗವೀರಪಟ್ಣ ರಸ್ತೆಯಾಗಿ ಶ್ರೀ ಕ್ಷೇತ್ರದಲ್ಲಿ ಸಮಾಪನೆಗೊಂಡಿತು.

ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್‌ ಕುಮಾರ್‌, ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಉಳ್ಳಾಲ ಶ್ರೀ ಶಾರದಾ ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಯು.ಎಸ್‌. ಪ್ರಕಾಶ್‌, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಆಡಳಿತ ಮೊಕ್ತೇಸರ ಯು. ಸಂಜೀವ ಪಡುಮನೆ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ, ಉಳ್ಳಾಲ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಶ್ರೀಕರ ಕಿಣಿ, ಉಳ್ಳಾಲ ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಐತಪ್ಪ ಶೆಟ್ಟಿಗಾರ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಪ್ರಮುಖ ದಿನಕರ್‌ ಉಳ್ಳಾಲ್‌, ಶ್ರೀ ಕ್ಷೇತ್ರ ಒಂಬತ್ತುಕೆರೆಯ ಆಡಳಿತ ಮೊಕ್ತೇಸರ ಶರತ್‌ಚಂದ್ರ ಗಟ್ಟಿ, ಉಳ್ಳಾಲ ಶ್ರೀಭಗವತೀ ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ್‌ ಉಳ್ಳಾಲ್‌, ಉಳ್ಳಾಲ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರ ಶ್ರೀಯಾನ್‌, ಜಾಗೃತ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರವಿಚಂದ್ರ ಬಲ್ಲಾಳ್‌, ವಿದ್ಯಾರಣ್ಯ ಕಲಾವೃಂದದ ಅಧ್ಯಕ್ಷ ಯು. ಚೂಡಪ್ಪ ಉಳ್ಳಾಲ್‌, ಶಿವಶಕ್ತಿ ಯುವಕ ಮಂಡಲದ ಅಧ್ಯಕ್ಷ ಸತೀಶ್‌ ಶೆಟ್ಟಿಗಾರ, ಉಳ್ಳಾಲ ಓಂ ಶಕ್ತಿ ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ್‌ ಯು.ಎಸ್‌., ಉಳ್ಳಾಲ ಧರ್ಮಶಾಸ್ತನಗರ ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಗೋಪಾಲ ಗೊಳಿಯಡಿ, ಉಳ್ಳಾಲ ಶ್ರೀ ಶಾರದಾ ಮಹಿಳಾ ವೇದಿಕೆಯ ಅಧ್ಯಕ್ಷೆ ಜಾನಕಿ ಪುತ್ರನ್‌, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ದಯಾನಂದ ಚಂದನ್‌ ಗುರಿಕಾರ, ಉಪಾಧ್ಯಕ್ಷ ಸುರೇಂದ್ರ ಪುತ್ರನ್‌ ಗುರಿಕಾರ, ಪ್ರಧಾನ ಕಾರ್ಯದರ್ಶಿ ಶಂಕರ ಬಂಗೇರ, ಕೋಶಾಧಿಕಾರಿ ಸುನಾಕ್ಷ ಕೋಟ್ಯಾನ್‌ ಗುರಿಕಾರ, ಜತೆ ಕಾರ್ಯದರ್ಶಿ ರಾಜೇಶ್‌ ಪುತ್ರನ್‌, ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here