Home ಧಾರ್ಮಿಕ ಸುದ್ದಿ ಇಫ್ತಾರ್‌ ಕೂಟದಿಂದ ಸಮಾಜದಲ್ಲಿ ಸೌಹಾರ್ದ: ಖಾದರ್‌

ಇಫ್ತಾರ್‌ ಕೂಟದಿಂದ ಸಮಾಜದಲ್ಲಿ ಸೌಹಾರ್ದ: ಖಾದರ್‌

219
0
SHARE

ಉಳ್ಳಾಲ: ಸೌಹಾರ್ದ ಇಫ್ತಾರ್‌ ಕೂಟ ಅಯೋಜಿಸುವ ಮೂಲಕ ಉಳ್ಳಾಲ ಭಾಗದಲ್ಲಿ ಧರ್ಮಗಳ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಮೂಡಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

ಅಳೇಕಲ ನುಸ್ರತುಲ್ ಚಾರಿಟೆಬಲ್ ಟ್ರಸ್ಟ್‌ ಆಶ್ರಯದಲ್ಲಿ ಪೊಸಕುರಲ್ ಬಳಗದ ಸಹಕಾರದಿಂದ ಹಳೆಕೋಟೆ ಹಝ್ರತ್‌ ಸಯ್ಯಿದ್‌ ಮದನಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಆರನೇ ವರ್ಷದ ಸೌಹಾರ್ದ ಇಫ್ತಾರ್‌ ಕೂಟದಲ್ಲಿ ಮಾತನಾಡಿದರು.

ಪೆರ್ಮನ್ನೂರು ಸಂತ ಸೆಬಾಸ್ಟಿಯನ್‌ ಚರ್ಚ್‌ ಧರ್ಮಗುರು ಡಾ| ಜೆ.ಬಿ. ಸಲ್ಡಾನ್ಹಾ, ಮಾನವರು ಸೌಹಾರ್ದದಿಂದ ಬದುಕಬೇಕು. ಪರರ ಸೇವೆ ಮಾಡುವ ಗುಣ ಪ್ರತಿಯೊಬ್ಬರಲ್ಲೂ ಬಂದಾಗ ಸೌಹಾರ್ದಕ್ಕೆ ಎಂದಿಗೂ ಧಕ್ಕೆ ಬಾರದು ಎಂದರು.

ಉಳ್ಳಾಲ ಸಯ್ಯಿದ್‌ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್‌ ಮಾತನಾಡಿ, ಊರಿನಲ್ಲಿ ಶಾಂತಿ, ಸೌಹಾರ್ದಕ್ಕಾಗಿ ಸರ್ವ ಧರ್ಮೀಯರನ್ನು ಇಫ್ತಾರ್‌ಗೆ ಕರೆಯಲಾಗಿದೆ. ಉಳ್ಳಾಲದಲ್ಲಿ ಮುಂದೆಂದಿಗೂ ಶಾಂತಿ ಕದಡುವ ಪ್ರಯತ್ನ ನಡೆಯಬಾರದು ಎಂದು ಹೇಳಿದರು.

ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಅಡ್ಯಂತಾಯ, ಹಳೆಕೋಟೆ ಮಸ್ಜಿದುಲ್ ಕರೀಂ ಖತೀಬ್‌ ಉಸ್ಮಾನ್‌ ಸಅದಿ, ನಗರಸಭೆಯ ಮಾಜಿ ಸದಸ್ಯ ಫಾರೂಕ್‌ ಯು. ಎಚ್., ಸಲಾಂ ಮದನಿ ಉಸ್ತಾದ್‌, ಜಮಾಅತ್‌ ಸದಸ್ಯ ಅಲಿಮೋನು ಮೊದಲಾದವರು ಉಪಸ್ಥಿತರಿದ್ದರು.

ನುಸ್ರತುಲ್ ಮಸಾಕೀನ್‌ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಮಹಮ್ಮದ್‌ ತ್ವಾಹ ಸ್ವಾಗತಿಸಿದರು. ಪೊಸಕುರಲ್ ನಿರ್ದೇಶಕ ವಿದ್ಯಾಧರ್‌ ಶೆಟ್ಟಿ ಪ್ರಾಸ್ತಾವಿಸಿದರು. ಕೆ.ಎಂ.ಕೆ. ಮಂಜನಾಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here