ಉಳ್ಳಾಲ: ಎಸ್ಎಸ್ಎಫ್ ಪಟ್ಲ ಶಾಖೆಯ ವತಿಯಿಂದ ಮಹರತುಲ್ ಬದ್ರಿಯ್ನಾ ಮಜ್ಲಿಸ್ ಹಾಗೂ ಬೃಹತ್ ಸೌಹಾರ್ದ ಇಫ್ತಾರ್ಕೂಟವು ಪಟ್ಲ ತಖ್ವಾ ಜುಮ್ಮಾ ಮಸೀದಿಯಲ್ಲಿ ಜರಗಿತು.
ಮಹರತುಲ್ ಬದ್ರಿಯ್ನಾ ಮಜ್ಲಿಸ್ ನೇತೃತ್ವವನ್ನು ಪಟ್ಲ ಮಸೀದಿ ಖತೀಬರಾದ ಎಂ.ಸಿ. ಮಹಮ್ಮದ್ ಫೈಝಿ ಉಸ್ತಾದ್ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಉಳ್ಳಾಲ ನಗರಸಭಾ ಕೌನ್ಸಿಲರ್ಗಳಾದ ಎಂಜಿನಿಯರ್ ಮಷ್ತಾ ಕ್ ಪಟ್ಲ, ಬಾಜಿಲ್ ಡಿ’ಸೋಜಾ, ಪಟ್ಲ ಮಸೀದಿ ಅಧ್ಯಕ್ಷ ಮಹಮದ್, ಎಸ್ಎಸ್ಎಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಸೈಯ್ಯದ್ ಖುಬೈಬ್ ತಂಙಳ್, ಡಿವಿಶನ್ ಕಾರ್ಯದರ್ಶಿ ಜಾಫರ್ ತೊಕ್ಕೊಟ್ಟು, ಪಟ್ಲ ಶಾಖೆಯ ಅಧ್ಯಕ್ಷ ನಝೀರ್, ಪ್ರಧಾನ ಕಾರ್ಯದರ್ಶಿ ಕಿಫಾಯತ್, ಕೋಶಾಧಿಕಾರಿ ಶಿಹಾಬುದ್ದೀನ್, ಉಸ್ಮಾನ್ ಕಲ್ಲಾಪು ಉಪಸ್ಥಿತರಿದ್ದರು.