ಉಳೆಪಾಡಿ : ಪುರಾತನ ದೇವಾಲಯಗಳ ಅಭಿವೃದ್ಧಿಯಿಂದ ಗ್ರಾಮ ದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ವಿದೆ ಎಂದು ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಅರ್ಚಕ ರಾಮದಾಸ ಆಚಾರ್ಯ ಹೇಳಿದರು. ಅವರು ಮಾ. 25 ರಂದು ಉಳೆಪಾಡಿ ಶ್ರೀ ಉಮಾಮಹೇಶ್ವರೀ ಮಹಾಗಣಪತಿ ದೇವಸ್ಥಾನದಲ್ಲಿ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಪುಲ್ಲೋಡಿ ಬೀಡು ಮಾತನಾಡಿದರು. ಮುಂಡ್ಕೂರು ಮಧ್ವಪತಿ
ಆಚಾರ್ಯ, ಯುಗಪುರುಷದ ಭುವನಾಭಿ ರಾಮ ಉಡುಪ, ಅರ್ಚಕ ಪದ್ಮನಾಭ ಭಟ್, ಚಿತ್ತರಂಜನ್ ಶೆಟ್ಟಿ, ನಾರಾಯಣ ಶೆಟ್ಟಿ ಉಳೆಪಾಡಿ, ಕೃಷ್ಣ ಶೆಟ್ಟಿ ಪಡ್ಡಣಗುತ್ತು, ಭಾಸ್ಕರ ಶೆಟ್ಟಿ ಮುಂಡ್ಕೂರು, ಸಾಯಿನಾಥ ಶೆಟ್ಟಿ ಮುಂಡ್ಕೂರು, ಕರುಣಾಕರ ಶೆಟ್ಟಿ ಉಳೆಪಾಡಿ, ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಶೆಟಿx, ದಿವಾಕರ ಚೌಟ, ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎನ್. ಶೆಟ್ಟಿ ಬಡಗುಮನೆ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಕಲ್ಲಮರಿಗೆ ಬೀಡು ಉಪಸ್ಥಿತರಿದ್ದರು. ರವೀಂದ್ರ ಸ್ವಾಗತಿಸಿ, ಶರತ್ ಶೆಟ್ಟಿ ನಿರೂಪಿಸಿದರು.