ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭೀಷೇಕದ ಸಂದರ್ಭ ಭಕ್ತರಿಗೆ ಸ್ವಾಗತ ಕೋರುವ ಆಕರ್ಷಕ ವಿನ್ಯಾಸಗಳ ದ್ವಾರಗಳನ್ನು ವಿವಿಧೆಡೆ ನಿರ್ಮಿಸಲಾಗಿದ್ದು, ಉಜಿರೆ ಬೆಳಾಲು ಕ್ರಾಸ್ನಲ್ಲಿ ನಿರ್ಮಿಸಲಾದ ಶ್ರೀ ಜನಾರ್ದನ ಸ್ವಾಮಿ ದ್ವಾರವನ್ನು ಶನಿವಾರ ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಅವರು ಶ್ರೀ ಮಂಜುನಾಥ ಸ್ವಾಮಿಯ ಮತ್ತು ಉಜಿರೆಯ ಶರತ್ಕೃಷ್ಣ ಪಡ್ವೆಟ್ನಾಯ ಅವರು ಶ್ರೀ ಜನಾರ್ದನ ಸ್ವಾಮಿಯ ಪ್ರಸಾದವನ್ನು ಲೇಪಿಸುವುದರ ಮೂಲಕ ಉದ್ಘಾಟಿಸಿದರು.
ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ಕುಮಾರ್, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಡಾ| ಎಂ.ಎಂ. ದಯಾಕರ್, ಸೋಮಶೇಖರ ಶೆಟ್ಟಿ, ಅರುಣ್ಕುಮಾರ್, ಲಕ್ಷ್ಮಣ ಸಫಲ್ಯ, ಶ್ರೀಧರ ಕೆ., ದಿನೇಶ ಚೌಟ, ಮೋಹನಕುಮಾರ್, ಅರವಿಂದ ಕಾರಂತ, ಮೋಹನ ಶೆಟ್ಟಿಗಾರ್, ಮೋಹನ್ ಕೆ., ರವಿ ಚಕ್ಕಿತ್ತಾಯ, ದಿನೇಶ್ ಕುಮಾರ್, ಜಗದೀಶ ಪ್ರಸಾದ್, ಶಶಿಕಾಂತ ಕಾರಂತ, ಎಸ್.ಬಿ. ಹಮೀದ್ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಪೈ ಸ್ವಾಗತಿಸಿದರು.