Home ಧಾರ್ಮಿಕ ಸುದ್ದಿ ‘ಪ್ರೀತಿಯಿಂದ ಕಾಣುವುದೇ ಏಸು ಕ್ರಿಸ್ತರ ಸಂದೇಶ’

‘ಪ್ರೀತಿಯಿಂದ ಕಾಣುವುದೇ ಏಸು ಕ್ರಿಸ್ತರ ಸಂದೇಶ’

ಉಜಿರೆ ಚರ್ಚ್‌ ಸುವರ್ಣ ಮಹೋತ್ಸವ ಸಮಾರೋಪ

1311
0
SHARE

ಬೆಳ್ತಂಗಡಿ : ಕ್ರೈಸ್ತ ಸಮುದಾಯವು ಎಲ್ಲರನ್ನೂ ಸಮಾನವಾಗಿ ಕಾಣುವ ಸಮುದಾಯ ವಾಗಿದ್ದು, ಇತರ ಧರ್ಮದವರನ್ನೂ ಪ್ರೀತಿ ಯಿಂದ ಕಾಣುತ್ತದೆ. ಪ್ರಭು ಏಸು ಕ್ರಿಸ್ತರ ಸಂದೇಶವೂ ಇದೇ ಆಗಿರುತ್ತದೆ ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೆ| ಡಾ| ಪೀಟರ್‌ ಪೌಲ್ ಸಲ್ಡಾನ್ಹ ಹೇಳಿದರು.

ಮಂಗಳವಾರ ಉಜಿರೆ ಅನುಗ್ರಹ ಸಭಾಂಗಣ ದಲ್ಲಿ ನಡೆದ ಉಜಿರೆ ಸಂತ ಅಂತೋನಿ ಚರ್ಚ್‌ ನ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚಿಸಿದರು.

ಬೆಳ್ತಂಗಡಿ ಧರ್ಮಪ್ರಾಂತದ ಬಿಷಪ್‌ ರೆ| ಡಾ| ಲಾರೆನ್ಸ್‌ ಮುಕ್ಕುಯಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತ ಧರ್ಮದ ಕೊಡುಗೆ ವಿಶೇಷವಾಗಿದ್ದು, ಇದು ಸಾಮಾಜಿಕ ಬದಲಾವಣೆಗೂ ಕಾರಣವಾಗಿದೆ. ಉಜಿರೆ ಸಂತ ಅಂತೋನಿ ಚರ್ಚ್‌ ಕ್ರೈಸ್ತ ಧರ್ಮದ ಜತೆಗೆ ಎಲ್ಲ ಜಾತಿ-ಧರ್ಮದವರ ಕ್ಷೇತ್ರವಾಗಿಯೂ ಬೆಳೆದಿದೆಎಂದರು.

ಬೆಳ್ತಂಗಡಿ ಚರ್ಚ್‌ನ ಧರ್ಮಗುರು ವಂ| ಬೊನವೆಂಚರ್‌ ನಜ್ರೆತ್‌ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಚರ್ಚ್‌ನಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು, ಪಾಲನಾ ಸಮಿತಿಯ ಉಪಾಧ್ಯಕ್ಷರು, ದಾನಿಗಳನ್ನು ಗೌರವಿಸಲಾಯಿತು. ದಿ| ವಂ| ಇ.ಪಿ. ಡಯಾಸ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಉಜಿರೆ ಗ್ರಾ.ಪಂ. ಅಧ್ಯಕ್ಷ ಕೆ.ಶ್ರೀಧರ ಪೂಜಾರಿ, ಚರ್ಚ್‌ ಪಾಲನ ಸಮಿತಿಯ ಉಪಾಧ್ಯಕ್ಷ ಅರುಣ್‌ ಜೆ.ಎನ್‌. ರೆಬೆಲ್ಲೊ ಉಪಸ್ಥಿತರಿದ್ದರು. ಕಾರ್ಯದರ್ಶಿ ವಲೇರಿಯನ್‌ ರೊಡ್ರಿಗಸ್‌ ವರದಿ ವಾಚಿಸಿದರು.

ಧರ್ಮಗುರು ವಂ| ಜೇಮ್ಸ್‌ ಡಿ’ಸೋಜಾ ಸ್ವಾಗತಿಸಿದರು. ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಂ| ಉದಯ ಫೆರ್ನಾಂಡೀಸ್‌ ವಂದಿಸಿದರು. ಮೋಲಿ ವಾಸ್‌ ಹಾಗೂ ಲವಿನಾ ಫೆರ್ನಾಂಡೀಸ್‌ ನಿರ್ವಹಿಸಿದರು.

ಪ್ರಕೃತಿ ದೇವರ ಕಲಾಕೃತಿ
ಪ್ರಕೃತಿ ದೇವರ ಕಲಾಕೃತಿಯಾಗಿದ್ದು, ಇವೆಲ್ಲವೂ ದೇವರ ಶಬ್ದದಿಂದ ರೂಪಿತವಾಗಿದೆ. ಏಸು ಕ್ರಿಸ್ತರೇ ಇದರ ಸಂಯೋಜಕರಾಗಿದ್ದಾರೆ. ಹೀಗಾಗಿ ನಾವೆಲ್ಲರೂ ಏಸು ಕ್ರಿಸ್ತರ ಕರೆಗೆ ಓಗೊಟ್ಟು ಕೆಲಸ ಮಾಡಬೇಕಿದೆ. ಉಜಿರೆ ಚರ್ಚ್‌ ಕಳೆದ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದು, ಮುಂದೆ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಮಾಡಬೇಕಿದೆ.
ರೆ| ಡಾ| ಪೀಟರ್‌ ಪೌಲ್ ಸಲ್ಡಾನ್ಹ,
ಮಂಗಳೂರು ಧರ್ಮಪ್ರಾಂತದ ಬಿಷಪ್‌

LEAVE A REPLY

Please enter your comment!
Please enter your name here