ಕಟಪಾಡಿ: ಉದ್ಯಾವರ ಶಂಭುಕಲ್ಲು ವೀರಭದ್ರ ದುರ್ಗಾಪರಮೇಶ್ವರಿ ಗಣಪತಿ ಮಹಾಕಾಳಿ ಪಂಜುರ್ಲಿ ಸನ್ನಿಧಿಯಲ್ಲಿ ದ್ವೈತ ವೇದಾಂತ ವಿದ್ವಾನ್ ಬ್ರಹ್ಮಶ್ರೀ ಕೆ.ಎ. ಸರ್ವೋತ್ತಮ ತಂತ್ರಿಗಳ ನೇತೃತ್ವದಲ್ಲಿ ಜ.18ರಿಂದ ಮೊದಲ್ಗೊಂಡು ಜ.23ರ ಪರ್ಯಂತ ಉತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ರಥೋತ್ಸವ(ಕಲ್ಲಡ)ಕ್ಕೆ ಪೂರ್ವಭಾವಿಯಾಗಿ ಜ.20ರಂದು ಮಧ್ಯಾಹ್ನ ರಥಾರೋಹಣ ಜರಗಿತು.
ಆ ಪ್ರಯುಕ್ತ ಬೆಳಗ್ಗೆ ಅಲಂಕಾರ ಪೂಜೆ, ಮಹಾಪೂಜೆ, ಪಲ್ಲಪೂಜೆ, ರಥಾರೋಹಣ ಅನಂತರ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭ ಪ್ರಧಾನ ಅರ್ಚಕ ಯು.ಎಸ್. ಶ್ರೀನಿವಾಸ ಭಟ್, ಅರ್ಚಕ ವೃಂದ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಟೇಲರ ಮನೆ ಉಲ್ಲಾಸ್ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಸಂತ ನಾಯಕ್, ತಿಲಕ್ರಾಜ್ ಸಾಲ್ಯಾನ್, ಗಿರೀಶ್ ಗುಡ್ಡೆಯಂಗಡಿ, ಶಾಂತಿ ಶಂಭುಕಲ್ಲು, ಯು. ಗೋಪಾಲ ದೇವಾಡಿಗ, ಆಶಾವಾಸು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿರಾಜ್ ಯು. ಮತ್ತಿತರರು ಪಾಲ್ಗೊಂಡಿದ್ದರು.