Home ಧಾರ್ಮಿಕ ಸುದ್ದಿ ಉದ್ಯಾವರ : ಜೀರ್ಣೋದ್ಧಾರ ಸಮಾಲೋಚನ ಸಭೆ

ಉದ್ಯಾವರ : ಜೀರ್ಣೋದ್ಧಾರ ಸಮಾಲೋಚನ ಸಭೆ

1435
0
SHARE

ಕಟಪಾಡಿ: ಉದ್ಯಾವರ ಕೇದಾರ್‌ ಶ್ರೀ ಬ್ರಹ್ಮೆಶ್ವರ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಬಗ್ಗೆ ಸಮಿತಿಯನ್ನು ರಚಿಸಲು ಮತ್ತು ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಸಮಾಲೋಚನಾ ಸಭೆಯು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶೇಖರ ಕೆ ಕೋಟ್ಯಾನ್‌ ಸಭಾಧ್ಯಕ್ಷತೆಯಲ್ಲಿ ರವಿವಾರ ಜರಗಿತು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಪ್ರವೀಣ್‌ ಶೆಟ್ಟಿ ಕೊರಂಗ್ರಪಾಡಿ ಇವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು ಜೀರ್ಣೋದ್ಧಾರ ಕೆಲಸ ಕಾರ್ಯಗಳಲ್ಲಿ ಗ್ರಾಮಸ್ಥರ ಸಹಕಾರವನ್ನು ಅವರು ಕೋರಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಬಹಳ ಪುರಾತನ ಕಾರಣಿಕ ಪ್ರಸಿದ್ಧ ವಾದ ಈ ದೇವಸ್ಥಾನವು ಜೀರ್ಣೋದ್ಧಾರಗೊಳ್ಳುವಲ್ಲಿ ಸಂಬಂಧ‌ ಪಟ್ಟ ಇಲಾಖೆಯಿಂದ ಮತ್ತು ಸರಕಾರದಿಂದ ಸಿಗುವ ಅನುದಾನವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಗೆ ಕ್ಷೇತ್ರದ ಶಾಸಕನಾಗಿ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಭರವಸೆ ನೀಡಿದರು .

ಮಾಜಿ ಸಚಿವ, ಮಾಜಿ ಶಾಸಕ ವಿನಯ ಕುಮಾರ್‌ ಸೊರಕೆ ಮಾತನಾಡಿ, ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡಲಿದ್ದು, ಹಾಲಿ ಶಾಸಕರೊಂದಿಗೆ ಸರಕಾರದ ಅನುದಾನ ತರುವಲ್ಲಿ ಕೈಜೋಡಿಸುವುದಾಗಿ ತಿಳಿಸಿದರು.

ಕ್ಷೇತ್ರದ ತಂತ್ರಿಗಳಾದ ವೇ|‌ ಮೂ| ಕೃಷ್ಣ ಮೂರ್ತಿ ತಂತ್ರಿ, ಅರ್ಚಕ ಸುಧೀಂದ್ರ ಉಪಾಧ್ಯ, ಮೇಲ್ಮಠದ ವಾದಿರಾಜ ಅಚಾರ್ಯ. ತಾಲೂಕು ಪಂಚಾಯತ್‌ ಸದಸ್ಯೆ ರಜನಿ ಆರ್‌ .
ಅಂಚನ್‌, ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಗಂಧಿ ಶೇಖರ್‌, ಶ್ರೀ ಬ್ರಹ್ಮಬೆ„ರ್ದಕಳ ಸೇವಾ ಸಮಿತಿಯ ಕೋಶಾಧಿಕಾರಿ ದಿನೇಶ್‌ ಸಾಲ್ಯಾನ್‌, ತೀಯಾ ಸಮಾಜದ ಅಧ್ಯಕ್ಷ ಶಂಕರ್‌ ಪಾಲನ್‌, ಶ್ರೀಕ್ಷೇತ್ರಕ್ಕೆ ಸಂಬಂಧಪಟ್ಟ ಭಜನ ಮಂಡಳಿಯ ಅಧ್ಯಕ್ಷ ಪುರಂದರ ಪೂಜಾರಿ, ಯಕ್ಷಗಾನ ಮಂಡಳಿಯ ಅಧ್ಯಕ್ಷ ಯು. ಸೀತಾರಾಮ ಗಾಣಿಗ, ತರುಣ ವೃಂದದ ಅಧ್ಯಕ್ಷ ಯು ಸುದೇಶ್‌ ಕುಮಾರ್‌ ಭಾಗವಹಿಸಿದ್ದರು. ಶೇಖರ್‌ ಕೋಟ್ಯಾನ್‌ ಸ್ವಾಗತಿಸಿದರು. ಸುರೇಶ್‌ ಸಿ. ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here