Home ಧಾರ್ಮಿಕ ಕಾರ್ಯಕ್ರಮ ಪಂಜುರ್ಲಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ

ಪಂಜುರ್ಲಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ

ಉದ್ಯಾವರ : ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇಗುಲ

899
0
SHARE
ಒಂದೇ ಗರ್ಭಗುಡಿಯೊಳಗೆ ಶ್ರೀ ವೀರಭದ್ರ, ಶ್ರೀ ಗಣಪತಿ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕಲಶೋತ್ಸವ ನೆರವೇರಿತು.

ಕಟಪಾಡಿ : ಸುಮಾರು 3 ಕೋ. ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಗೊಂಡಿರುವ ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಗಣಪತಿ ಮಹಾಕಾಳಿ ಪಂಜುರ್ಲಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ನವೀಕೃತ ಗರ್ಭಗುಡಿ ತೀರ್ಥ ಮಂಟಪ ಸುತ್ತು ಪೌಳಿ ಅಗ್ರಸಭಾ ಗೋಪುರ ಸಮರ್ಪಣಪೂರ್ವಕ ಅಷ್ಟಬಂಧ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಎ.20ರಂದು ಸಂಪನ್ನಗೊಂಡಿತು.

ಆ ಪ್ರಯುಕ್ತ ಬೆಳಗ್ಗೆ 8.00 ಗಂಟೆಯಿಂದ ಪುಣ್ಯಾಹ ವಾಚನ, ದುರ್ಗಾಹೋಮ, ಕಲಶಾಭಿಷೇಕ ಪ್ರಾರಂಭ, 11.00 ಗಂಟೆಗೆ ಶ್ರೀ ವೀರಭದ್ರ, ಶ್ರೀ ಗಣಪತಿ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮ ಕುಂಭಾಭಿಷೇಕ, ನ್ಯಾಸ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ದೇವಸ್ಥಾನದ ತಂತ್ರಿಗಳಾದ ದ್ವೈತ ವೇದಾಂತ ವಿದ್ವಾನ್‌ ಬ್ರಹ್ಮಶ್ರೀ ಕೆ. ಎ. ಸರ್ವೋತ್ತಮ ತಂತ್ರಿಗಳ ನೇತೃತ್ವದಲ್ಲಿ ಜರಗಿತು.

ಅನಂತರ ಪಲ್ಲಪೂಜೆ, ಅನ್ನಸಂತರ್ಪಣೆ ನೆರವೇರಿದ್ದು, ಸಂಜೆಬಲಿ ಉತ್ಸವ, ರಂಗಪೂಜೆ, ಭೂತ ಬಲಿ ಮೊದಲಾದ ಧಾರ್ಮಿಕ ಕಾರ್ಯಕ್ರಮ ಜರಗಿದವು.

ಈ ಸಂದರ್ಭ ಪ್ರಧಾನ ಅರ್ಚಕ ಶ್ರೀನಿವಾಸ ಮೂರ್ತಿ, ಅರ್ಚಕ ವೃಂದ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿರಾಜ್‌ ಯು. ಬೆಂಗಳೂರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಉಡುಪಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಪಠೇಲರ ಮನೆ ಉಲ್ಲಾಸ್‌ ಶೆಟ್ಟಿ, ಎಲ್ಲ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here