Home ಧಾರ್ಮಿಕ ಕಾರ್ಯಕ್ರಮ ಮೋಡದಿಂದಾಗಿ ಕಾಣದ ಚಂದ್ರಗ್ರಹಣ

ಮೋಡದಿಂದಾಗಿ ಕಾಣದ ಚಂದ್ರಗ್ರಹಣ

1305
0
SHARE

ಉಡುಪಿ: ಬುಧವಾರ ಮುಂಜಾನೆ ಆಗಸದಲ್ಲಿ ಕಂಡುಬಂದ ಚಂದ್ರಗ್ರಹಣವನ್ನು ನೋಡಲು ಜನರಿಗೆ ಸಾಧ್ಯವಾಗಲಿಲ್ಲ.

ಉಡುಪಿ ಶ್ರೀಕೃಷ್ಣಮಠವೂ ಸೇರಿದಂತೆ ವಿವಿಧ ಮಠಗಳು, ದೇವಸ್ಥಾನಗಳಲ್ಲಿ ಗ್ರಹಣದ ಸಂದರ್ಭ ಸ್ನಾನ ಮಾಡಿ ಜಪ, ಪಾರಾಯಣಗಳನ್ನು ಮಾಡಲಾಯಿತು. ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆ ಬಳಿಕ ದೇವರ ದರ್ಶನ ಇದ್ದಿರಲಿಲ್ಲ. ಚಂದ್ರಗ್ರಹಣ ಶಾಂತಿಯೂ ಬಹುತೇಕ ಕಡೆಗಳಲ್ಲಿ ನಡೆಯಿತು.

ಶ್ರೀ ಕೃಷ್ಣ ಮಠದ ಮಧ್ವ ಸರೋ ವರದಲ್ಲಿ ಚಂದ್ರಗ್ರಹಣ ಪ್ರಯುಕ್ತ ಗ್ರಹಣ ಸ್ಪರ್ಶಕಾಲದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕೃಷ್ಣಾಪುರ, ಪೇಜಾವರ ಕಿರಿಯ, ಕಾಣಿಯೂರು, ಸೋದೆ, ಅದಮಾರು ಕಿರಿಯ, ಪಲಿಮಾರು ಕಿರಿಯ ಶ್ರೀಪಾದರು ಸ್ನಾನಮಾಡಿ ಗ್ರಹಣಕಾಲದಲ್ಲಿ ಜಪಾನು ಷ್ಠಾನ ಮಾಡಿ ವಿಶೇಷ ಪೂಜೆ ನಡೆಸಿದರು. ಭಕ್ತರು ವಿವಿಧ ದೇವಸ್ಥಾನಗಳಿಗೆ ಆಗಮಿಸಿ ದೀಪಗಳನ್ನು ಬೆಳಗಿದರು.

LEAVE A REPLY

Please enter your comment!
Please enter your name here