Home ಧಾರ್ಮಿಕ ಸುದ್ದಿ ಶ್ರೀ ಕೃಷ್ಣಮಠಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆ

ಶ್ರೀ ಕೃಷ್ಣಮಠಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆ

ಸುವರ್ಣ ಗೋಪುರ ಸಮರ್ಪಣೋತ್ಸವ ಸಂಭ್ರಮ

238
0
SHARE
ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಆಶ್ರಯದಲ್ಲಿ ಶ್ರೀ ಕೃಷ್ಣಮಠಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಉಡುಪಿ: ಶ್ರೀ ಕೃಷ್ಣಮಠದ ಸುವರ್ಣ ಗೋಪುರ ಸಮರ್ಪಣೋತ್ಸವದ ಅಂಗವಾಗಿ ಮಂಗಳವಾರ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಆಶ್ರಯದಲ್ಲಿ ಶ್ರೀ ಕೃಷ್ಣಮಠಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹಸುರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಜೋಡುಕಟ್ಟೆಯಿಂದ ಆರಂಭ ಗೊಂಡ ಮೆರವಣಿಗೆಯು ಕವಿ ಮುದ್ದಣ ಮಾರ್ಗದ ಮೂಲಕ ಸಂಸ್ಕೃತ ಕಾಲೇಜು, ರಥಬೀದಿ ಮೂಲಕ ಶ್ರೀ ಕೃಷ್ಣಮಠಕ್ಕೆ ತೆರಳಿತು.

ರಥಬೀದಿ ವ್ಯಾಪಾರಸ್ಥರು, ಕಾಪು ಮಹಿಷಮರ್ದಿನಿ ಸಮೂಹ ಸಂಸ್ಥೆ, ಮಹಾಲಿಂಗೇಶ್ವರ ಗೆಳೆಯರ ಬಳಗ ಬ್ರಹ್ಮಾವರ, ವಿಶ್ವಕರ್ಮ ಒಕ್ಕೂಟ ಉಡುಪಿ, ದ.ಕ., ಸಹಿತ ಮೈಸೂರು, ಮಂಗಳೂರು, ಸುರತ್ಕಲ್, ಸಾಸ್ತಾನ, ನೀಲಾವರ, ಬ್ರಹ್ಮಾವರ ಬೈಕಾಡಿಯ ಸುಮಾರು 125ಕ್ಕೂ ಅಧಿಕ ವಾಹನಗಳು ಮೆರವಣಿಗೆಯಲ್ಲಿ ಸಾಗಿ ಬಂದವು.

LEAVE A REPLY

Please enter your comment!
Please enter your name here