ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಸಲ್ಪಡುವ ಯೋಗದೀಪಿಕಾ ಗುರುಕುಲ ಹಾಗೂ ತತ್ವದೀಪಿಕಾ ಗುರುಕುಲದಲ್ಲಿ 10 ವರ್ಷಗಳಲ್ಲಿ ಅಧ್ಯಯನ ನಡೆಸಿ 2 ವರ್ಷಗಳಲ್ಲಿ ಪರ್ಯಾಯ ಶ್ರೀಪಾದ ರಿಂದ ಶ್ರೀಮನ್ನಾ$Âಯಸುಧಾ ಪಾಠವನ್ನು ಅಧ್ಯಯನ ಮಾಡಿದ 16 ಮಂದಿ ವಿದ್ಯಾರ್ಥಿಗಳಿಗೆ ಸುಧಾ ಮಂಗಲೋತ್ಸವ ರವಿವಾರ ನಡೆಯಿತು.
ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನಡೆಸಿದ 12ನೇ ಸುಧಾ ಮಂಗಲೋತ್ಸವ ಇದಾಗಿದೆ. ಮಂಗಲೋತ್ಸವ ದಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸಾಗರ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಭಾವೀ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡು ಅನುಗ್ರಹ ಸಂದೇಶ ನೀಡಿದರು.