Home ಧಾರ್ಮಿಕ ಸುದ್ದಿ ಶ್ರೀಕೃಷ್ಣ ಮಠ ಪರಿಸರದಲ್ಲಿ ಜಪ, ಪೂಜ

ಶ್ರೀಕೃಷ್ಣ ಮಠ ಪರಿಸರದಲ್ಲಿ ಜಪ, ಪೂಜ

1189
0
SHARE

ಉಡುಪಿ: ಅತ್ತ ಆಗಸದಲ್ಲಿ ಸೂರ್ಯನ ಕಂಕಣಗ್ರಹಣ ಸಂಭವಿಸುತ್ತಿದ್ದಾಗ ಶ್ರೀಕೃಷ್ಣಮಠದ ಪರಿಸರದಲ್ಲಿ ವಿವಿಧ ಮಠಾಧೀಶರು, ವೈದಿಕರು ಜಪ, ಪಾರಾಯಣಾದಿಗಳಲ್ಲಿ ನಿರತರಾಗಿದ್ದರು.

ಬೆಳಗ್ಗೆ ಬೇಗ ನೈರ್ಮಾಲ್ಯ ವಿಸರ್ಜನೆ ಪೂಜೆಯನ್ನು ಮಾತ್ರ ಮಾಡಲಾಗಿತ್ತು. ಅನಂತರ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀ ಪಾದರು, ಶ್ರೀ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಪಾದರು, ಶ್ರೀ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ವೈದಿಕರು ಮಧ್ವಸರೋವರದಲ್ಲಿ ಸ್ನಾನ ಮಾಡಿ ಗ್ರಹಣಕಾಲದಲ್ಲಿ ಜಪಾನುಷ್ಠಾನ ಮಾಡಿದರು.

ಗ್ರಹಣ ಬಿಟ್ಟ ಬಳಿಕ ಮಿಕ್ಕುಳಿದ ನೈವೇದ್ಯ ಸಹಿತವಾದ ಎಲ್ಲ ಪೂಜೆಗಳನ್ನು ಸ್ವಾಮೀಜಿ ನಡೆಸಿದರು. ತರಕಾರಿಗಳನ್ನು ಹೆಚ್ಚುವುದು, ನೆಲಶುದ್ಧ ಮಾಡುವುದೂ ಸೇರಿದಂತೆ ಭೋಜನಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಗ್ರಹಣ ಕಾಲದ ಅನಂತರ ನಡೆಸಲಾಯಿತು. ಹೀಗಾಗಿ ಮಧ್ಯಾಹ್ನದ ಊಟ ನಡೆಯುವಾಗ ಮೂರು ಗಂಟೆ ಆಯಿತು. ಗ್ರಹಣಕಾಲದಲ್ಲಿ ಗ್ರಹಣ ಶಾಂತಿಯನ್ನು ಪಲಿಮಾರು ಶ್ರೀಪಾದದ್ವಯರ ಸಮ್ಮುಖ ವೈದಿಕರು ನಡೆಸಿದರು.

ಗ್ರಹಣದ ಸಮಯದಲ್ಲಿ ಭಕ್ತರು ಶ್ರೀಕೃಷ್ಣಮಠ, ಶ್ರೀಅನಂತೇಶ್ವರ, ಶ್ರೀಚಂದ್ರಮೌಳೀಶ್ವರ ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆದು ನಂದಾದೀಪಕ್ಕೆ ಎಣ್ಣೆ ಹಾಕಿದರು.

LEAVE A REPLY

Please enter your comment!
Please enter your name here