Home ಧಾರ್ಮಿಕ ಸುದ್ದಿ ತುಳಸೀ ಸಂಕೀರ್ತನೆ ನಿನಾದ

ತುಳಸೀ ಸಂಕೀರ್ತನೆ ನಿನಾದ

1133
0
SHARE

ಉಡುಪಿ : ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಬಲಿಪಾಡ್ಯ ದಿಂದ 12 ದಿನಗಳ ಕಾಲ ತುಳಸೀ ಸಂಕೀರ್ತನೆಯ ವಿಶಿಷ್ಟ ಹೆಜ್ಜೆ, ನಿನಾದ ಕೇಳುತ್ತದೆ. ಸೋಮವಾರ ಗೋಪೂಜೆ, ತುಳಸೀ ಪೂಜೆ, ಕೆಲವೆಡೆ ದೀಪಗಳ ಹಬ್ಬ ಹೀಗೆ ಎರಡು ಮೂರು ಸಂಭ್ರಮಗಳ ಸಂಗಮ. ತುಳಸೀ ಪೂಜೆ ನಡೆಯುವುದು ರಾತ್ರಿ ಪೂಜೆಯ ಬಳಿಕ. ಸುಮಾರು 7.45ರ ಬಳಿಕ ಶ್ರೀಕೃಷ್ಣ ಮಠದ ಗರ್ಭಗುಡಿಯ ಹೊರಭಾಗ ನಿರ್ಮಿಸಿದ ತುಳಸೀ ಕಟ್ಟೆಯಲ್ಲಿ ತುಳಸೀ ಪೂಜೆ ನಡೆಯುತ್ತದೆ.

ಅನಂತರ ಗರ್ಭಗುಡಿಗೆ ತುಳಸೀ ಕಟ್ಟೆ ಸಹಿತ ಮೂರು ಸುತ್ತು, ತುಳಸೀ ಕಟ್ಟೆಗೆ ಮಾತ್ರ ಒಂದು ಸುತ್ತು ಶ್ರೀ ವಾದಿರಾಜ ಸ್ವಾಮಿಗಳಿಂದ ರಚನೆಗೊಂಡ ಹಾಡು ಗಳನ್ನು ಹಾಡುತ್ತ ಪ್ರದಕ್ಷಿಣೆ ಬರುತ್ತಾರೆ. ಇದರಲ್ಲಿ ಸ್ವಾಮೀಜಿಯವರೂ ತಾಳ ತಟ್ಟಿ ಭಜನೆಯನ್ನು ಮಾಡುತ್ತಾರೆ.

ಈ ವಿಶಿಷ್ಟ ಕ್ರಮ ನ. 9ರ ಉತ್ಥಾನದ್ವಾದಶಿ ವರೆಗೆ ನಡೆಯುತ್ತದೆ. ಅಂದು ಬೆಳಗ್ಗೆ ತುಳಸೀ ಪೂಜೆ, ಸಂಜೆ ಮಧ್ವಸರೋವರದ ನಡುವಿನಲ್ಲಿ ಕ್ಷೀರಾಬ್ದಿ ಪೂಜೆ ನಡೆಯುತ್ತದೆ. ಶ್ರೀಕೃಷ್ಣ ಮಠದ ಉತ್ಸವ ಮೂರ್ತಿ ಹೊರಗೆ ಬರುವುದು ಇದೇ ದಿನ. ಉತ್ಸವ ಆರಂಭವಾಗುವುದೂ ಇದೇ ದಿನ. ಇದೇ ಸಂದರ್ಭ ವಾಡಿಕೆಯ ಕಾಲ ನಡೆಯಲಿದೆ. ಮೊದಲ ದಿನದಲ್ಲಿ ಸೇವಾದಾರರ ಸೇವೆಯೂ, ನಾಲ್ಕನೆಯ ದಿನ ಸೇವಾದಾರರ ಲಕ್ಷದೀಪೋತ್ಸವ ಸೇವೆ ನಡೆಯಲಿದೆ.

ನಾಲ್ಕು ತಿಂಗಳ ಚಾತುರ್ಮಾಸ್ಯ ವ್ರತದ ಆಹಾರ ಪದ್ಧತಿ ಕೊನೆಯಾಗುವುದು ನ. 7ರ ದಶಮಿಯಂದು. ಉತ್ಥಾನ ದ್ವಾದಶಿಯಿಂದ ಸಾಮಾನ್ಯ ಆಹಾರ ಪದ್ಧತಿ ಜಾರಿಗೆ ಬರಲಿದೆ.

ತುಳಸೀ ಸಂಕೀರ್ತನೆ ಕ್ರಮ ಕುಂಜಾರು, ಪಡುಬಿದ್ರಿ, ಅಲೆವೂರು, ಮಟ್ಟು ಮೊದಲಾದೆಡೆ ನಡೆಯು ತ್ತದೆ. ಇಲ್ಲಿ ಮನೆಗಳಿಗೆ ತೆರಳಿ ಸಂಕೀರ್ತನೆ ಮಾಡುವ ಕ್ರಮವಿದೆ. ಸುಮಾರು 25 ವರ್ಷಗಳ ಹಿಂದೆ ತುಳಸೀ ಸಂಕೀರ್ತನೆ ಸಂಸ್ಕೃತಿಗಳು
ಮರೆಯಾಗಬಾರದೆಂದು ಶ್ರೀ ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶೇಷ ಆಸ್ಥೆ ವಹಿಸಿ ಸಂಘಟನೆ ಮಾಡಿದ್ದರು. ವಿವಿಧ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ತುಳಸೀ ಪೂಜೆ ನಡೆಯುತ್ತದೆ.

LEAVE A REPLY

Please enter your comment!
Please enter your name here