Home ಧಾರ್ಮಿಕ ಸುದ್ದಿ ಪೂರ್ವಾರ್ಧ ಜನಸೇವೆ, ಉತ್ತರಾರ್ಧ ಜನಾರ್ದನ ಸೇವೆ

ಪೂರ್ವಾರ್ಧ ಜನಸೇವೆ, ಉತ್ತರಾರ್ಧ ಜನಾರ್ದನ ಸೇವೆ

ಭಾರತ, ಭಾಗವತಾದಿ ಗ್ರಂಥ ಬಿಡುಗಡೆ

1118
0
SHARE

ಉಡುಪಿ : ಪ್ರಯಾಗ ಮಠದ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು ಹಿಂದಿಗೆ ಅನುವಾದಿಸಿದ ಮಹಾ ಭಾರತ, ಶ್ರೀಮದ್ಭಾಗವತಾದಿ 9 ಗ್ರಂಥಗಳ ಮೊದಲ ಆವೃತ್ತಿ ಯನ್ನು ಅವರ 90ನೇ ವರ್ಷದ ಜನ್ಮದಿನವಾದ ಸೋಮವಾರ ರಾಜಾಂಗಣದಲ್ಲಿ 90ರ ಹೊಸ್ತಿಲಿನಲ್ಲಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.

ಶ್ರೀ ವಿದ್ಯಾತ್ಮತೀರ್ಥರು ಸಂನ್ಯಾಸ ಪೂರ್ವದಲ್ಲಿ ವಾದಿರಾಜ ಪಂಚಮುಖೀ ಆಗಿರುವಾಗ ವಿಶ್ವ ಹಿಂದೂ ಪರಿಷತ್‌ ನಲ್ಲಿ ಸುದೀರ್ಘ‌ ಕಾಲ ಸೇವೆ ಸಲ್ಲಿಸಿದ್ದರು. ಬರಗಾಲ ಮೊದಲಾದ ಸಂದರ್ಭ ತಾವು ಆರಂಭಿಸಿದ ಪರಿಹಾರ ಕೇಂದ್ರ ಗಳಲ್ಲಿ ತಿಂಗಳುಗಟ್ಟಲೆ ಸೇವೆ ಸಲ್ಲಿಸಿ ದ್ದರು. ಅದು ಜೀವನದ ಪೂರ್ವಾರ್ಧ. ಈಗ ಜೀವನದ ಉತ್ತರಾರ್ಧದಲ್ಲಿ ಸನ್ಯಾಸಿಯಾಗಿ ಧಾರ್ಮಿಕ ಕೆಲಸಗಳಲ್ಲಿ ತೊಡಗಿರುವುದು ಸ್ತುತ್ಯರ್ಹ ಎಂದು ಪೇಜಾವರ ಶ್ರೀಗಳು ಹೇಳಿದರು.

ಕಲ್ಲಿನಿಂದ ವಿಗ್ರಹ ಕೆತ್ತುವಾಗ ಶಿಲ್ಪಿಯೊಬ್ಬ ಕಲ್ಲಿನ ಬೇಡವಾದ ಅಂಶಗಳನ್ನು ಬೇರ್ಪಡಿಸುತ್ತಾನೆ. ಮಣ್ಣಿನ ವಿಗ್ರಹ ಮಾಡುವಾಗ ಯಾವ ಅಂಶಗಳು ಬೇಕೋ ಅವುಗಳನ್ನು ತುಂಬಿಸುತ್ತಾನೆ. ಇದೇ ರೀತಿ ಹಿಂದೆ ಪೇಜಾವರ ಶ್ರೀಗಳು, ಅನಂತರ ಪಲಿಮಾರು ಶ್ರೀಗಳು ನನ್ನನ್ನು ತಿದ್ದಿದರು ಎಂದು ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ತಿಳಿಸಿದರು.

ಶ್ರೀ ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥರು, ಕೋಲಾರ ತಂಬಿಹಳ್ಳಿ ಮಠದ ಶ್ರೀ ವಿದ್ಯಾಸಿಂಧು ಮಾಧವತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಮೋಹನಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ವಾದಿರಾಜ ಪಂಚಮುಖೀಯವರು ಹಿಂದೆ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಸಂಘಟನ ಕಾರ್ಯದರ್ಶಿ ಯಾಗಿದ್ದರು. 2003ರಲ್ಲಿ ಶ್ರೀ ಪಲಿಮಾರು ಶ್ರೀಗಳಿಂದ ಸಂನ್ಯಾಸಾಶ್ರಮ ಪಡೆದು ಉತ್ತರ ಭಾರತದ ಪ್ರಯಾಗದಲ್ಲಿ ತಣ್ತೀಜ್ಞಾನ ಪ್ರಸಾರ,
ಗ್ರಂಥ ರಚನೆ- ಪ್ರಕಾಶನಗಳಲ್ಲಿ ತೊಡಗಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here