Home ಧಾರ್ಮಿಕ ಸುದ್ದಿ ಚಾತುರ್ಮಾಸ್ಯ ಏಕಾದಶಿಯ ಹರಿವಾಣ ನೃತ್ಯ ಸೇವೆ!

ಚಾತುರ್ಮಾಸ್ಯ ಏಕಾದಶಿಯ ಹರಿವಾಣ ನೃತ್ಯ ಸೇವೆ!

3191
0
SHARE

ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಸ್ವಾಮೀಜಿ ಮತ್ತು ಉಡುಪಿಯ ಸ್ವಾಮೀಜಿಯವರು ಎಲ್ಲಿ ಮೊಕ್ಕಾಂ ಇರುತ್ತಾರೋ ಅಲ್ಲಿ ಪ್ರಥಮ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿವರೆಗೆ ಚಾತುರ್ಮಾಸ್ಯದ ನಾಲ್ಕು ತಿಂಗಳ ಪ್ರತೀ ಏಕಾದಶಿಯಂದು ರಾತ್ರಿ ಸ್ವಾಮೀಜಿಯವರು ಹರಿವಾಣ ನೃತ್ಯ ಸೇವೆಯನ್ನು ನಡೆಸುತ್ತಾರೆ.

ರಾತ್ರಿ ಪೂಜೆಯಾದ ಬಳಿಕ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿಯವರು ಕೃಷ್ಣನ ಗರ್ಭಗುಡಿ ಹೊರಗಿನ ಚಂದ್ರಶಾಲೆಯಲ್ಲಿ ಕುಳಿತಿರುತ್ತಾರೆ. ಆಗ ಸೂರ್ಯವಾದ್ಯವೇ ಮೊದಲಾದ ನಾಲ್ಕು ಬಗೆಯ ವಾದ್ಯೋಪಕರಣಗಳನ್ನು ಕಲಾವಿದರು ನುಡಿಸುತ್ತಾರೆ. ಅನಂತರ ಸಂಕೀರ್ತನೆ ನಡೆಯುತ್ತದೆ. ಭಾಗವತರು ಪದ್ಯಗಳನ್ನು ಹಾಡುತ್ತಾರೆ. ಪುರಾಣ ಹೇಳುವವರು ಸಾಂಕೇತಿಕವಾಗಿ ಪುರಾಣ ಪ್ರವಚನ ಮಾಡುತ್ತಾರೆ.

ತೀರ್ಥಮಂಟಪದೆದುರು ಬಂದು ಸ್ವಾಮೀಜಿ ಮಂಗಳಾರತಿ ಮಾಡುತ್ತಾರೆ. ಆಗ ಭಾಗವತರು “ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರೂ…|’ ದಾಸರ ಹಾಡನ್ನು ಹಾಡುತ್ತಾರೆ. ದೇವರಿಗೆ ಸಮರ್ಪಿಸಿದ ತುಳಸಿ ಮತ್ತು ಹೂವುಗಳನ್ನು ಹರಿವಾಣದಲ್ಲಿರಿಸಿ ಹರಿವಾಣವನ್ನು ತಲೆ ಮೇಲೆ ಹೊತ್ತು ಸ್ವಾಮೀಜಿ ಸರಳವಾಗಿ ನರ್ತಿಸುತ್ತಾರೆ.

ಏಕಾದಶಿ ದಿನ ನಿರ್ಜಲ ಉಪವಾಸದಲ್ಲಿದ್ದು ರಾತ್ರಿ ಪೂಜೆಯಾದ ಬಳಿಕ ಪಾಂಡುರಂಗ ಈ ಜಗಕ್ಕೆ ಮುಖ್ಯಸ್ಥನೆಂಬುದು ಅನುಸಂಧಾನ ಮಾಡಿ ಸಾರುವುದು ಹಾಡಿನ ಸಾರ. ರಾತ್ರಿ ಪುರಾಣ ಪ್ರವಚನ, ಸಂಕೀರ್ತನ, ನರ್ತನದಿಂದ ಜಾಗರಣೆ ಇರಬೇಕೆಂಬ ಸಂಕೇತಾರ್ಥದಲ್ಲಿ ಈ ಆಚರಣೆಗಳು ಚಾಲ್ತಿಗೆ ಬಂದಿವೆ. ಮರುದಿನ ದ್ವಾದಶಿಯಾದ ಕಾರಣ ಮುಂಜಾನೆ 2 ಗಂಟೆಗೆ ಸ್ವಾಮೀಜಿ ಎದ್ದು ಎಲ್ಲ ಪೂಜೆಗಳನ್ನು ಬೇಗ ನೆರವೇರಿಸುತ್ತಾರೆ. ಹೀಗಾಗಿ ಏಕಾದಶಿ ರಾತ್ರಿ ಹೆಚ್ಚು ಕಡಿಮೆ ನಿದ್ದೆ ಪ್ರಮಾಣ ಕಡಿಮೆ ಅಂದರೆ ಜಾಗರಣೆ ಇರುತ್ತದೆ.

 

LEAVE A REPLY

Please enter your comment!
Please enter your name here