Home ಧಾರ್ಮಿಕ ಸುದ್ದಿ ಉಡುಪಿ ಶ್ರೀಕೃಷ್ಣ ಮಠ: 3 ಸಾವಿರ ಮಾಸ್ಕ್ ವಿತರಣೆ

ಉಡುಪಿ ಶ್ರೀಕೃಷ್ಣ ಮಠ: 3 ಸಾವಿರ ಮಾಸ್ಕ್ ವಿತರಣೆ

1456
0
SHARE

ಉಡುಪಿ : ಉಡುಪಿಯ ಅಷ್ಟಮಠಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಬಾಗಲಕೋಟೆಯ ಕುಣಿಬೆಂಚಿ ಗ್ರಾಮದ ಶ್ರೀ ಕೃಷ್ಣಮುಖ್ಯಪ್ರಾಣ ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ ಸಾಂಸ್ಕೃತಿಕ ಸಂಘದ ಆಶ್ರಯಲ್ಲಿ ಕೋವಿಡ್ ವೈರಸ್‌ ಹರಡದಂತೆ ತಡೆಯುವ ಉದ್ದೇಶದಿಂದ ಸುಮಾರು 3 ಸಾವಿರದಷ್ಟು ಮಾಸ್ಕ್ ಗಳನ್ನು ತಯಾರಿಸಿ ಮಠದ ಸಿಬಂದಿಗಳಿಗೆ ಹಾಗೂ ಸ್ಥಳೀಯರಿಗೆ ಉಚಿತವಾಗಿ ವಿತರಿಸಲಾಯಿತು.

ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಪಡುಬಿದ್ರಿಯ ಪಲಿಮಾರು ಮಠದಲ್ಲಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉಡುಪಿಯ ಕಾಣಿಯೂರು ಮಠದಲ್ಲಿ ಹಾಗೂ ಪರ್ಯಾಯ ಶ್ರೀಕೃಷ್ಣಮಠದ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥಶ್ರೀಪಾದರು ಶ್ರೀಕೃಷ್ಣ ಮಠ ಬಡಗುಮಾಳಿಗೆಯಲ್ಲಿ ಮಾಸ್ಕ್ ಅನ್ನು ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷರಾದ ಶೇಖರ ಮಂಗಳಗುಡ್ಡ , ಉಪಾಧ್ಯಕ್ಷ ಹನುಮಂತ ಕೋ.ಬೇನಾಳ, ಸದಸ್ಯರಾದ ಪ್ರದೀಪ್‌ ಹೊನ್ನಪ್ಪ ಬಿ.ಶೆಟ್ಟಿ, ಸಂದೀಪ್‌ ಕೆ., ವೀರೇಶ್‌ ಆರ್‌., ನಾಗರಾಜ್‌ ಬಿ.ಶೆಟ್ಟಿ, ಮಂಜುನಾಥ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here