ಉಡುಪಿ: ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿ ಯವರು ಶನಿವಾರ ರಾತ್ರಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.
ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಬಂದಿದ್ದೆ. ಇಷ್ಟು ದೂರ ಬಂದ ಬಳಿಕ ಉಡುಪಿ ಶ್ರೀಕೃಷ್ಣಮಠಕ್ಕೂ ಅಗತ್ಯವಾಗಿ ಬರಬೇಕೆಂದೆನಿಸಿ ಬಂದಿದ್ದೇನೆ ಎಂದು ರವಿಶಂಕರ್ ಗುರೂಜಿ ಹೇಳಿದರು.
ಶ್ರೀಕೃಷ್ಣಮಠದಲ್ಲಿ ರಾತ್ರಿ ಪೂಜೆ ನಡೆಯುವ ವೇಳೆಗೆ ಆಗಮಿಸಿದ ಗುರೂಜಿ ಯವರನ್ನು ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶ ಪ್ರಿಯತೀರ್ಥ ಶ್ರೀಪಾದರು ಪ್ರಸಾದವನ್ನು ನೀಡಿ ಗೌರವಿಸಿದರು. ಗುರ್ಮೆ ಸುರೇಶ ಶೆಟ್ಟಿ ಉಪಸ್ಥಿತರಿದ್ದರು.