ಉಡುಪಿ: ರಾಜ್ಯ ಸರಕಾರ ಸೋಮವಾರ ಶೋಕಾಚರಣೆ ಆದೇಶಿಸಿರುವ ನಿಟ್ಟಿನಲ್ಲಿ ಕನಕ ಜಯಂತಿ ಉತ್ಸವವನ್ನು ಕನಕದಾಸ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ವತಿಯಿಂದ ಸರಳವಾಗಿ ಆಚರಿಸಲಾಯಿತು.
ಉಡುಪಿ ರಥಬೀದಿಯಲ್ಲಿರುವ ಕನಕದಾಸರ ಗುಡಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅರ್ಚಕ ಕೊಡಂಚರು ಪೂಜೆ ಸಲ್ಲಿಸಿದರು. ರಥಯಾತ್ರೆ ಸಮಿತಿಯ ರಾಜ್ಯಾಧ್ಯಕ್ಷ ಓಂಶ್ರೀ ಕೃಷ್ಣಮೂರ್ತಿ, ಪ್ರಭಾವತಿ, ಉಡುಪಿ ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ, ಅಧ್ಯಕ್ಷ ಹನುಮಂತ ಬಿ., ಪದಾಧಿಕಾರಿಗಳಾದ ಹನುಮಂತ
ಐಹೊಳೆ, ಗ್ಯಾನಪ್ಪ ಕುರಿ, ಬಸವರಾಜ ವೈ. ಕುರುಬರ್, ಪರಶು ವೈ. ಕುರುಬರ್, ಬೈಲಪ್ಪ, ಸಿದ್ದಪ್ಪ ಬೆನಕವಾರಿ, ಮುತ್ತಪ್ಪ ಕುರಿ ಮೊದಲಾದವರು ಉಪಸ್ಥಿತರಿದ್ದು ಪೂಜೆ ಸಲ್ಲಿಸಿದರು. ಶ್ರೀಕೃಷ್ಣಮಠದಲ್ಲಿ ಮಹಾಪೂಜೆಗೆ ತೆರಳುವ ಮುನ್ನ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಕನಕನ ಗುಡಿಗೆ ಹೋಗಿ ಪೂಜೆ ಸಲ್ಲಿಸಿದರು.