ಉಡುಪಿ: ಪರ್ಯಾಯ ಅದಮಾರು ಮಠ ಹಾಗೂ ಕೃಷ್ಣ ಮಠದಲ್ಲಿ ಆಶ್ರಯದಲ್ಲಿ ಹನುಮ ಜಯಂತಿ ಅಂಗವಾಗಿ ಲೋಕಕಲ್ಯಾಣಾರ್ಥ ವಾಯುಸ್ತುತಿ ಪುನಶ್ಚರಣ ಹೋಮ ಬುಧವಾರ ನಡೆಯಿತು. ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜಕ್ಕೆ ಬರುವ ಕ್ಷೋಭೆ ಪರಿಹಾರ ಹಾಗೂ ಲೋಕಕ್ಷೇಮಕ್ಕೆ ಭಗವಂತನಿಗೆ ನಿಷ್ಠರಾಗಿ ನಡೆದುಕೊಳ್ಳಬೇಕು. ಇದಕ್ಕೆ ಹನುಮಂತ ಮಾದರಿ. ಈ ಅನುಸಂಧಾನದ ಮೂಲಕ ಹನುಮಜಯಂತಿ ಆಚರಿಸಬೇಕು. ಬುದ್ಧಿವಂತಿಕೆ, ಬಲ, ಯಶಸ್ಸು, ಧೈರ್ಯ, ನಿರ್ಭತ್ವ, ಅರೋಗತ ಇವೆಲ್ಲಾ ಮುಖ್ಯಪ್ರಾಣ ಪ್ರಾರ್ಥನೆಯಿಂದ ಪ್ರಾಪ್ತಿಯಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ರೋಗ ಪರಿಹಾರಕ್ಕಾಗಿ ವಾಯುಸ್ತುತಿ ಹೋಮದಿಂದ ಅಗ್ನಿ ಮೂಲಕ ಹನುಮನ ಅಂತರ್ಯಾಮಿ ರಾಮದೇವರನ್ನು ಆರಾಧನೆ ಮಾಡಿ, ಕೃಷ್ಣ ಮಠ ತನ್ನ ಕರ್ತವ್ಯ ಪೂರೈಸಿದೆ ಎಂದರು. ಪರ್ಯಾಯ ಶ್ರೀ ಈಶಪ್ರಿಯ ತೀರ್ಥಸ್ವಾಮೀಜಿ ಮಾತನಾಡಿ, ಹನುಮ ಭಕ್ತಾಗ್ರೇಸರ. ಆತನ ಆರಾಧನೆಯಿಂದ ಬುದ್ಧಿ ಒಳ್ಳೆಯದಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮನೆಯೊಳಗೆ ಇರುವುದು
ಬುದ್ಧಿವಂತಿಕೆ ಲಕ್ಷಣ. ನಮ್ಮ ಒಳಿತಿಗಾಗಿ, ಆರೋಗ್ಯಕ್ಕಾಗಿ ಸರ್ಕಾರದ ಆದೇಶವನ್ನು ಪಾಲಿಸೋಣ ಎಂದರು. ವಿದ್ವಾಂಸ ಶ್ರೀರಮಣ ಕಲ್ಕೂರ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಸಾಲಿಗ್ರಾಮ: ಸರಳ ಆಚರಣೆ
ಉಡುಪಿ: ಪ್ರತಿ ವರ್ಷ ಹನುಮ ಜಯಂತಿಯಂದು ಸಾಲಿಗ್ರಾಮ ಆಂಜನೇಯ ದೇವಸ್ಥಾನಕ್ಕೆ ಸಾವಿರಾರು ಭಕ್ತಾ ಧಿಗಳು ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದರು ಹಾಗೂ ಬೆಳಗ್ಗೆಯಿಂದಲೇ ದೇಗುಲದ ವತಿಯಿಂದ ವಿಶೇಷ ಕಾರ್ಯಕ್ರಮಗಳು ನಡೆಯುತಿತ್ತು, ಆದರೆ ಈ ಬಾರಿ ಲಾಕ್ಡೌನ್ ಕಾರಣಕ್ಕೆ ಅತ್ಯಂತ ಸರಳ ರೀತಿಯಲ್ಲಿ ಹನುಮಜಯಂತಿ ಆಚರಿಸಲಾಯಿತು.
ದೇಗುಲದ ಅರ್ಚಕರು ಬೆಳಗ್ಗೆ 5.30ಕ್ಕೆ ಆಗಮಿಸಿ ಶಾಸ್ತ್ರೋಕ್ತವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರ ವೇರಿಸಿ ಗರ್ಭಗುಡಿಗೆ ಬೀಗ ಹಾಕಿ ತೆರಳಿದ್ದರು. ಪೂಜೆ, ಪ್ರಸಾಧ ವಿತರಣೆ ಇಲ್ಲದಿದ್ದರೂ ಮುಖ್ಯ ದ್ವಾರ ತೆರದಿದ್ದ ಕಾರಣಕ್ಕೆ ಬೆರಳೆಣಿಕೆಯ ಸಂಖ್ಯೆಯಲ್ಲಿ ಭಕ್ತಾ ಧಿಗಳು ಆಗಮಿಸಿ ಗರ್ಭಗುಡಿಯ ಎದುರು ನಿಂತು ಭಾರವಾದ ಮನಸಿಲ್ಲಿ ಆಂಜನೇಯನಿಗೆ ನಮಿಸಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಭಕ್ತರಿಂದ ಗಿಜಿಗುಡುತ್ತಿದ್ದ ರಥಬೀದಿ ಈ ಬಾರಿ ಖಾಲಿ-ಖಾಲಿಯಾಗಿತ್ತು