Home ಧಾರ್ಮಿಕ ಕಾರ್ಯಕ್ರಮ ಉಡುಪಿ ಶ್ರೀ ಸಿದ್ಧಿವಿನಾಯಕ ದೇಗುಲ ಸಪ್ತಮಿ ಪ್ರತಿಷ್ಠಾ ವರ್ಧಂತ್ಯುತ್ಸವ ಸಂಪನ್ನ

ಉಡುಪಿ ಶ್ರೀ ಸಿದ್ಧಿವಿನಾಯಕ ದೇಗುಲ ಸಪ್ತಮಿ ಪ್ರತಿಷ್ಠಾ ವರ್ಧಂತ್ಯುತ್ಸವ ಸಂಪನ್ನ

1391
0
SHARE

ಉಡುಪಿ: ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ಆವರಣದಲ್ಲಿರುವ ಶ್ರೀ ಸಿದ್ಧಿವಿನಾಯಕ ದೇಗುಲದಲ್ಲಿ ವೇ|ಮೂ| ಕೇಂಜ ಶ್ರೀಧರ ತಂತ್ರಿ ನೇತೃತ್ವದಲ್ಲಿ ಶುಕ್ರವಾರ ಸಪ್ತಮಿ ಪ್ರತಿಷ್ಠಾ ವರ್ಧಂತ್ಯುತ್ಸವ ಸಂಪನ್ನಗೊಂಡಿತು.

ವರ್ಧಂತಿ ಪ್ರಯುಕ್ತ ಗಣಹೋಮ, ಪೂಜಾ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ, ಭಜನೆ, ರಾತ್ರಿ ರಂಗಪೂಜೆ ನಡೆಯಿತು. ದೇಗುಲದ ವತಿಯಿಂದ ದಾನಿ ವಿ. ಸ್ವಾಮಿನಾಥನ್‌ ದಂಪತಿಗಳನ್ನು ಸಮ್ಮಾನಿಸಲಾಯಿತು.

ದೇಗುಲದ ಆಡಳಿತ ಮೊಕ್ತೇಸರ ಎಂ. ಶ್ರೀನಾಗೇಶ್‌ ಹೆಗ್ಡೆ ದಂಪತಿಗಳು, ಉಡುಪಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ದಂಪತಿಗಳು, ಹರಿದಾಸ ತಂತ್ರಿ ಪಾಡಿಗಾರು, ದೇಗುಲದ ಮೊಕ್ತೇಸರರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here