Home ಧಾರ್ಮಿಕ ಸುದ್ದಿ ಆ. 16-18: ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನ ಮಹೋತ್ಸವ

ಆ. 16-18: ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನ ಮಹೋತ್ಸವ

1079
0
SHARE

ಉಡುಪಿ: ಉಡುಪಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆಶೀರ್ವಾದ ಹಾಗೂ ಆಜ್ಞಾನುಸಾರ ವಾಗಿ ಪರ್ಯಾಯ ಶ್ರೀ ಪಲಿಮಾರು ಮಠದ 108 ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, 108 ಶ್ರೀ ವಿದ್ಯಾರಾಜೇ ಶ್ವರತೀರ್ಥ ಶ್ರೀಪಾದರು, ಅಷ್ಟಮಠಾಧೀಶರ ಸಾನ್ನಿಧ್ಯದಲ್ಲಿ ಆ. 16, 17, 18ರಂದು ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 348ನೇ ಆರಾಧನ ಮಹೋತ್ಸವ ನಡೆಯಲಿದೆ.

ಈ ಮೂರು ದಿನಗಳಲ್ಲಿ ಬೆಳಗ್ಗೆ 5ರಿಂದ 11.30ರ ತನಕ ಸುಪ್ರಭಾತ, ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ಸಹಸ್ರನಾಮಾರ್ಚನೆ, ಮಹಾಪೂಜೆ, ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ, ರಾತ್ರಿ 7ರಿಂದ ಹೂವಿನ ಪೂಜೆ, ದೀಪಾರಾಧನೆ, ರಥೋತ್ಸವ, ಪಾಲಕಿ ಉತ್ಸವ, ತೊಟ್ಟಿಲು ಪೂಜೆ, ಸ್ವಸ್ತಿವಾಚನ, ಮಂತ್ರಾಕ್ಷತೆ, ಆ. 17ರ ಸಂಜೆ ರಥಬೀದಿಯಲ್ಲಿ ಪ್ರಹ್ಲಾದರಾಯರ ರಥೋತ್ಸವ ನಡೆಯಲಿದೆ ಎಂದು ಮಠದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here