Home ಧಾರ್ಮಿಕ ಕಾರ್ಯಕ್ರಮ ಸುವರ್ಣಪುರಿ ಬಿಟ್ಟವನಿಗೆ ಸುವರ್ಣಗೋಪುರ

ಸುವರ್ಣಪುರಿ ಬಿಟ್ಟವನಿಗೆ ಸುವರ್ಣಗೋಪುರ

1530
0
SHARE

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಗೆ ಸುವರ್ಣ ಗೋಪುರ ಸಮರ್ಪಿಸಲಾಗುತ್ತಿದೆ. ಒಟ್ಟು ನೂರು ಕೆಜಿ ಚಿನ್ನದಲ್ಲಿ ರೂಪಿಸಲಾಗುತ್ತಿರುವ ಬೃಹತ್‌ ಯೋಜನೆ ಜಾರಿಗೊಂಡಿದೆ. ಇದು ಒಂದು ಬಗೆಯಲ್ಲಿ ಬಹಳ ವಿಶಿಷ್ಟವಾದುದು. ಅದರಲ್ಲೂ ಶ್ರೀಕೃಷ್ಣನಿಗಂತೂ ವಿಶೇಷವಾದದ್ದೇ.

ಸುವರ್ಣ ಗೋಪುರಮ್‌ ಸಮರ್ಪಣೆಯ ಉತ್ಸವ ಮೇ 31 ರಿಂದಲೇ ಆರಂಭವಾಗಿದೆ. ಇಂದು ಶಿಖರ ಪ್ರತಿಷ್ಠೆಯಂಥ ಮಹತ್ವದ ಕಾರ್ಯಕ್ರಮದ ಸಂದರ್ಭದಲ್ಲಿ ಉದಯವಾಣಿಯೊಂದಿಗಿನ ಸಂದರ್ಶನದಲ್ಲಿ ಇಡೀ ಯೋಜನೆಯ ರೂವಾರಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಒಟ್ಟೂ ಕಲ್ಪನೆ ಮತ್ತು ಸಾಕಾರಗೊಳ್ಳುತ್ತಿರುವ ಬಗೆ ಕುರಿತು ಸಾದ್ಯಂತವಾಗಿ ವಿವರಿಸಿದ್ದಾರೆ.

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಗೆ ಸುವರ್ಣ ಗೋಪುರ ಸಮರ್ಪಿಸಲಾಗುತ್ತಿದೆ. ಒಟ್ಟು ನೂರು ಕೆಜಿ ಚಿನ್ನದಲ್ಲಿ ರೂಪಿಸಲಾಗುತ್ತಿರುವ ಬೃಹತ್‌ ಯೋಜನೆ ಜಾರಿಗೊಂಡಿದೆ. ಇದು ಒಂದು ಬಗೆಯಲ್ಲಿ ಬಹಳ ವಿಶಿಷ್ಟವಾದುದು. ಅದರಲ್ಲೂ ಶ್ರೀಕೃಷ್ಣನಿಗಂತೂ ವಿಶೇಷವಾದದ್ದೇ.

ಸುವರ್ಣ ಗೋಪುರಮ್‌ ಸಮರ್ಪಣೆಯ ಉತ್ಸವ ಮೇ 31 ರಿಂದಲೇ ಆರಂಭವಾಗಿದೆ. ಇಂದು ಶಿಖರ ಪ್ರತಿಷ್ಠೆಯಂಥ ಮಹತ್ವದ ಕಾರ್ಯಕ್ರಮದ ಸಂದರ್ಭದಲ್ಲಿ ಉದಯವಾಣಿಯೊಂದಿಗಿನ ಸಂದರ್ಶನದಲ್ಲಿ ಇಡೀ ಯೋಜನೆಯ ರೂವಾರಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಒಟ್ಟೂ ಕಲ್ಪನೆ ಮತ್ತು ಸಾಕಾರಗೊಳ್ಳುತ್ತಿರುವ ಬಗೆ ಕುರಿತು ಸಾದ್ಯಂತವಾಗಿ ವಿವರಿಸಿದ್ದಾರೆ.

ಸುವರ್ಣ ಗೋಪುರ ನಿರ್ಮಾಣ ಕಲ್ಪನೆ ಹೇಗೆ ಮೂಡಿತು?
ನಾವು ತಿರುಪತಿ, ಶ್ರೀರಂಗ, ಚಿದಂಬರ ದೇವಸ್ಥಾನಗಳ ಸುವರ್ಣ ಗೋಪುರವನ್ನು ನೋಡಿದ್ದೆವು. ಅದನ್ನು ವಿಮಾನ ಗೋಪುರ ಎನ್ನುತ್ತಾರೆ. ಅಲ್ಲಿ ದೇವಸ್ಥಾನದ ಸಂಪ್ರೋಕ್ಷಣೆ ಸಂದರ್ಭ ಕಲಶಗಳನ್ನು ಶಿಖರಕ್ಕೆ ಅಭಿಷೇಕ ಮಾಡುತ್ತಾರೆ. ಇಲ್ಲಿನ ದೇವಸ್ಥಾನಗಳ ಆಕಾರ ಪ್ರತ್ಯೇಕ. ನಮ್ಮ ಶ್ರೀಕೃಷ್ಣ ಮಠದಲ್ಲಿಯೂ ಸುವರ್ಣ ಗೋಪುರವನ್ನು ಮಾಡಬಹುದೆಂದು ಹತ್ತು ವರ್ಷಗಳ ಹಿಂದೆಯೇ ಅನಿಸಿತ್ತು. ನಮ್ಮ ಕೃಷ್ಣನ ವಿಗ್ರಹ ದ್ವಾರಕೆಯಿಂದ ಬಂದಿರುವ ನಂಬಿಕೆ ಇದೆ. ದ್ವಾರಕೆಯನ್ನು ಬಿಟ್ಟು ಹೋಗುವಾಗ ಎಲ್ಲವನ್ನೂ ನೀರಿನಲ್ಲಿ ಮುಳುಗಿಸಿ ಹೋಗುತ್ತೇನೆಂದು ಶ್ರೀಕೃಷ್ಣ ಹೇಳಿರುವ ಉಲ್ಲೇಖ ಭಾಗವತ ಗ್ರಂಥದಲ್ಲಿದೆ. ದ್ವಾರಕೆಯಲ್ಲಿ ಈಗಿರುವುದು ತ್ರಿವಿಕ್ರಮ ದೇವರ ವಿಗ್ರಹ, ಕೃಷ್ಣನದ್ದಲ್ಲ. ದ್ವಾರಕೆಯಲ್ಲಿದ್ದ ಶ್ರೀಕೃಷ್ಣನ ವಿಗ್ರಹ ಬೇರೆಡೆ ಹೋಯಿತು ಎಂದು ದ್ವಾರಕೆಯಲ್ಲಿರುವ ಹಿರಿಯರು ಇಂದಿಗೂ ಹೇಳುತ್ತಾರೆ. ದ್ವಾರಕೆಗೆ ಸುವರ್ಣಪುರಿ ಎಂಬ ಹೆಸರು ಇತ್ತು. ಅಂದರೆ ಅವನ ಮನೆ ಸುವರ್ಣಮಯ. ಸುವರ್ಣಪುರಿಯನ್ನು ಬಿಟ್ಟು ಬಂದ ಶ್ರೀಕೃಷ್ಣನಿಗೆ ಸುವರ್ಣಗೋಪುರವನ್ನು ನಿರ್ಮಿಸೋಣ ಎಂದು ಪ್ರೇರಣೆಯಾಯಿತು. ಅದೀಗ ಸಾಕಾರಗೊಳ್ಳುತ್ತಿದೆಯಷ್ಟೇ.

•••ಶ್ರೀ ವಾದಿರಾಜಸ್ವಾಮಿಗಳ ಕಾಲದಲ್ಲಿ ಸುವರ್ಣ ಗೋಪುರ ಮಾಡುವುದು ಬೇಡವೆಂಬ ಸಂದೇಶ ಬಂದಿತ್ತು ಎನ್ನುತ್ತಾರಲ್ಲ?
ಈ ಯೋಜನೆ ಆರಂಭಿಸುವ ಪೂರ್ವದಲ್ಲಿ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಬಳಿ ಪ್ರಸ್ತಾವಿಸಿದೆ. ತನಗೂ ಈ ಯೋಜನೆ ಮಾಡಬೇಕೆಂಬ ಹಂಬಲವಿತ್ತು. ಆದರೆ ವಾದಿರಾಜಸ್ವಾಮಿಗಳಿಗೆ ಇದು ಬೇಡವೆಂಬ ಸೂಚನೆ ಬಂದಿತ್ತು ಎಂದು ತಿಳಿದಾಗ ಕೈಬಿಟ್ಟೆ ಎಂದರು. ಹಾಗಾದರೆ ನಾವೇನು ಮಾಡೋಣ ಎಂದು ಚಿಂತಿಸಿ ಶ್ರೀ ವಾದಿರಾಜರ ಸನ್ನಿಧಾನದಲ್ಲಿ ಪ್ರಸಾದವನ್ನು ನೋಡೋಣವೆಂದು ಪ್ರಸಾದ ನೋಡಿದೆವು. ಒಳ್ಳೆಯ ಸೂಚನೆ ಬಂದಿತು. ಅವರೇ ಈ ಕೆಲಸ ಮಾಡಿಸುತ್ತಿದ್ದಾರೆಂಬ ಅನುಸಂಧಾನದಲ್ಲಿ ನಾವಿದನ್ನು ಆರಂಭಿಸಿದೆವು.

•••ಹಾಗಿದ್ದರೆ ಶ್ರೀ ವಾದಿರಾಜ ಸ್ವಾಮಿಗಳಿಗೆ ಏಕೆ ಸೂಚನೆ ಬಂದಿದ್ದಿರಬಹುದು? ಈಗೇಕೆ ಒಪ್ಪಿಗೆ ಕೊಟ್ಟದ್ದಿರಬಹುದು?
ಉತ್ತರ ಭಾರತದ ರಾಜನೊಬ್ಬ ಬಂಗಾರವನ್ನು ಕೊಟ್ಟ ಎಂದು ವಾದಿರಾಜರ ಗುರು ಚರಿತೆಯಲ್ಲಿ ಉಲ್ಲೇಖವಿದೆ. ದೇವಸ್ಥಾನ ನಿರ್ಮಾಣ ಒಬ್ಬನ ಹಣದಲ್ಲಿ ಆಗಬಾರದೆಂದು ಶಾಸ್ತ್ರದಲ್ಲಿದೆ. ಆದರೆ ಅದು ಒಬ್ಬನ ಹಣವಾದ್ದರಿಂದ ಅದು ಬೇಡವೆಂದು ಸೂಚನೆ ಬಂದಿರಬಹುದು ಎಂಬುದು ನಮ್ಮ ಅಭಿಪ್ರಾಯ. ಈಗ ಹತ್ತಾರು ಜನರಿಂದ ಈ ಕೆಲಸ ಆಗುತ್ತಿದೆ. ಹಾಗಾಗಿ ನಮಗೆ ಪ್ರಸಾದದ ಮೂಲಕ ಒಪ್ಪಿಗೆ ಸಿಕ್ಕಿರಬಹುದು.

•••ಹಿಂದೆ ವಾದಿರಾಜಸ್ವಾಮಿಗಳಿಗೆ ಸೂಚನೆ ಬಂದಾಗ ಆ ಚಿನ್ನವನ್ನು ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ (ತಕ್ಷಕ ಪೊಟರೆ), ಸೋದೆ ಮಠದ ಭೂತರಾಜ, ನಾಗನ ಸನ್ನಿಧಿಯಲ್ಲಿ ಇರಿಸಿದರೆಂಬ ಮಾತಿದೆಯಲ್ಲ?ಇದು ಅಸಂಭಾವಿತವಲ್ಲ. ನಿಧಿ ರಕ್ಷಣೆಗಾಗಿ ನಾಗನ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡುವ ಕ್ರಮವಿದೆಯಲ್ಲ? ಆಗಿರಬಹುದು.

•••ಇಷ್ಟೊಂದು ದೊಡ್ಡ ಯೋಜನೆ ಕೈಗೆತ್ತಿಕೊಳ್ಳುವ ಧೈರ್ಯ ಹೇಗೆ ಬಂತು? ಜನರ ಸ್ಪಂದನೆ ಹೇಗಿದೆ?ಸುಮಾರು 100 ಕೆ.ಜಿ. ಸುವರ್ಣದ ಯೋಜನೆ ಇದು. ಒಂದು ಲಕ್ಷ ಜನರು ಒಂದು ಗ್ರಾಂ ಚಿನ್ನ ನೀಡಿದರೆ ಯೋಜನೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಆರಂಭಿಸಿದೆವು. ನಾವು ಮಾಡುವುದೇನಿಲ್ಲ, ದೇವರು, ಗುರುಗಳು ಮಾಡಿಸಿಕೊಳ್ಳುತ್ತಾರೆ. ಈಗ ಶೇ. 20 ಚಿನ್ನದ ಕೊರತೆ ಇದೆ. ಇದನ್ನು ಬೇರೆಯವರಿಂದ ತರಿಸಿಕೊಂಡಿದ್ದೇವೆ. ಅವರಿಗೆ ವಾಪಸು ಕೊಟ್ಟರಾಯಿತು. ಇನ್ನೂ6 ತಿಂಗಳು ಪೂಜಾವಧಿ ಇದೆ. ಅಷ್ಟರೊಳಗೆ ಅದು ಈಡೇರುತ್ತದೆಂಬ ನಂಬಿಕೆ ಇದೆ. ಒಮ್ಮೆ ಕೊಟ್ಟವರು ತಮಗೆ ಸಿಕ್ಕಿದ ಫ‌ಲಿತಾಂಶದಿಂದ ಮತ್ತೂಮ್ಮೆ ತಂದು ಕೊಟ್ಟದ್ದೂ ಇದೆ. ಮುನ್ನಡೆಸುವ ಶ್ರೀಕೃಷ್ಣ ಇರುವಾಗ ನಾವು ಸುಮ್ಮನೆ ನಡೆಯುವುದಷ್ಟೇ.

ಸುವರ್ಣ ಗೋಪುರ ಭಕ್ತರಿಗೆ ಸುತ್ತು ಬರುವಾಗ ಸರಿಯಾಗಿ ತೋರುವುದಿಲ್ಲ. ಇದಕ್ಕೇನಾದರೂ ಮಾಡುತ್ತೀರಾ?
ಮಳೆ ನೀರು ಬೀಳಬಾರದೆಂದು ಹಾಕಿರುವ ಪ್ಲಾಸ್ಟಿಕ್‌ ಶೀಟುಗಳನ್ನು ಸ್ವಲ್ಪ ಎತ್ತರಕ್ಕೆ ಹಾಕುತ್ತೇವೆ. ಆಗ ಕೆಳಗೆ ಸುತ್ತಿನಲ್ಲಿ ನಿಂತಾಗ ಗೋಪುರ ತೋರುತ್ತದೆ. ಇದಲ್ಲದೆ ಶ್ರೀಕೃಷ್ಣ ಮಠವನ್ನು ಪ್ರವೇಶ ಮಾಡಿ ಮುಂದೆ ಬರುವಾಗ ಒಳಕೊಟ್ಟಾರ ಎಂಬ ಜಾಗವಿದೆ. ಇದರ ಮೇಲೆ ತಾರಸಿ ನಿರ್ಮಿಸಿ ಅದರಲ್ಲಿ ನಿಂತು ಗೋಪುರವನ್ನು ನೋಡುವಂತೆ ಮಾಡುತ್ತೇವೆ.

ತಾವು ಚಿಕ್ಕವರಿರುವಾಗ ನಡೆಯಲು ಅಸಾಧ್ಯವಾಗಿತ್ತು. ತಾಯಿ ತಮ್ಮ ಉಪನಯನ ಮಾಡುವಾಗ ತಿರುಮಲ ತಿರುಪತಿಬೆಟ್ಟ ಹತ್ತಿಸಿಕೊಂಡು ಹೋಗುವುದಾಗಿ ಹರಕೆ ಹೊತ್ತು ಆಗಮಾಡಿಸಿದರಂತೆ. ಈಗ ಅದೇ ಶ್ರೀನಿವಾಸ ತನಗಿರುವಂತಹ ಸ್ವರ್ಣ ಗೋಪುರವನ್ನು ಶ್ರೀಕೃಷ್ಣನಿಗೂ ತಮ್ಮನ್ನು ನಿಮಿತ್ತವಾಗಿ ರಿಸಿ ಕೊಂಡು ಮಾಡಿಸಿದನೆಂದು ಅನಿಸುತ್ತದೆಯೆ?
ಹೌದು, ಹಾಗೆ ಅನಿಸುತ್ತದೆ. ಶ್ರೀನಿವಾಸ ಈ ತೆರನಾಗಿ ಸಂಬಂಧವನ್ನು ಹಚ್ಚಿಸಿರಲೂಬಹುದು. ಇಲ್ಲ ಎನ್ನಲಾರೆ.

••ನಿಮ್ಮ ಅವಧಿಯ ಮತ್ತೂಂದು ಪ್ರಮುಖ ಪರಿಕಲ್ಪನೆಯಾದ ಅಖಂಡ ಭಜನೆಯ ಹಿಂದಿರುವ ಪ್ರೇರಣೆ ಏನು?
ಕರಾವಳಿ ಪ್ರಾಂತದಲ್ಲಿ ಭಜನೆಯ ಪರಿಪಾಠವನ್ನು ಹಿಂದಿ ನಿಂದಲೂ ನೋಡುತ್ತಿದ್ದೇವೆ. ದಿನ, ವಾರ, 48, 108 ದಿನಗಳ ಅಖಂಡ ಭಜನೆ ಬೇರೆ ಬೇರೆ ಕಡೆ ನಡೆಯುತ್ತಿದೆ. ಹಿಂದಿನ ಪರ್ಯಾಯದಲ್ಲಿಯೂ ಅಖಂಡ ಭಜನೆ ಮಾಡಬೇಕೆಂದಿತ್ತು. ನಿರಂತರ ಮಾಡುವುದು ಹೇಗೆಂಬ ಅಧೈರ್ಯವಿತ್ತು. ತಿರುಪತಿ ತಿರುಮಲದಲ್ಲಿ ನಡೆದ ಪುರಂದರದಾಸರ ಆರಾಧನೆಗೆ ಹೋಗಿ ದ್ದಾಗ ಅಲ್ಲಿನ ವ್ಯವಸ್ಥಾಪಕರು ಆರು ಭಜನ ಮಂಡಳಿಗಳನ್ನು ನಿತ್ಯ ಕಳುಹಿಸಿಕೊಡುತ್ತೇವೆಂದರು. ಇದನ್ನೇ ಶ್ರೀನಿವಾಸನ ಸಂಕಲ್ಪ ಎಂದು ತಿಳಿದು ಮುಂದಡಿ ಇಟ್ಟೆವು. ಮಂತ್ರಾಲಯದ ದಾಸ ಸಾಹಿತ್ಯ ಪ್ರಾಜೆಕ್ಟ್, ಕರಾವಳಿ ಭಜನ ಮಂಡಳಿಗಳ ಒಕ್ಕೂಟದವರೂ ಸಹಕಾರ ನೀಡುತ್ತಿದ್ದಾರೆ. ಈಗ ಒಂದೊಂದು ತಂಡದ ಭಜನೆಯನ್ನು ಒಂದು ಗಂಟೆಗೆ ಸೀಮಿತಗೊಳಿಸುವಷ್ಟು ಸ್ಪಂದನೆ ಇದೆ.

••••ನಿತ್ಯ ಲಕ್ಷ ತುಳಸಿ ಅರ್ಚನೆ ಆಲೋಚನೆ ಕುರಿತು?
ಹಿಂದಿನ ಪರ್ಯಾಯದಲ್ಲಿ ವಾರಕ್ಕೊಮ್ಮೆ ಲಕ್ಷಾರ್ಚನೆಮಾಡಿದ್ದೆವು. ಈ ಬಾರಿ ವಿವಿಧ ಕಡೆಗಳಿಂದ ಬರುತ್ತಿರುವತುಳಸಿಯ ಪ್ರಮಾಣದಿಂದ ನಿತ್ಯ ಲಕ್ಷ ತುಳಸಿ ಅರ್ಚನೆ ಸಾಧ್ಯವಾಯಿತು. ಆ ತುಳಸಿಯೂ ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ಔಷಧಕ್ಕಾಗಿ ಬಳಕೆಯಾಗುತ್ತಿದೆ. ಒಂದು ಧಾರ್ಮಿಕ ಪ್ರಕ್ರಿಯೆ ವೈದ್ಯಕೀಯವಾಗಿಯೂ ಪ್ರಯೋಜನ ಗೊಳ್ಳುತ್ತಿದೆ. ಇದು ಆನಂದ ತರುವಂಥದ್ದೇ.

ಪಲಿಮಾರು ಸುವರ್ಣ ಸಂಬಂಧ
ಶ್ರೀ ಪಲಿಮಾರು ಮಠಕ್ಕೂ ಸುವರ್ಣ ಮತ್ತು ವಜ್ರಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಒಟ್ಟು 4 ಪರ್ಯಾಯಗಳ ಅವಧಿಯಲ್ಲಿ ಶ್ರೀ ಮಠವು ಶ್ರೀ ಕೃಷ್ಣನಿಗೆ ಸಮರ್ಪಿಸಿರುವುದು ವಿಶೇಷವಾಗಿ ವಜ್ರ ಮತ್ತು ಚಿನ್ನವನ್ನು. ಹಿಂದಿನ 3 ಪರ್ಯಾಯಗಳಲ್ಲಿ ಶ್ರೀ ಕೃಷ್ಣನಿಗೆ ವಜ್ರ ಕಿರೀಟ, ವಜ್ರ ಕವಚ ಹಾಗೂ ಸುವರ್ಣ ತೊಟ್ಟಿಲನ್ನು ಸಮರ್ಪಿಸಲಾಗಿತ್ತು. ಈ ಅವಧಿಯಲ್ಲಿ ಸಮರ್ಪಿಸುತ್ತಿರುವುದು ಸುವರ್ಣ ಗೋಪುರಮ್‌.

ಸಂದರ್ಶನ: ಮಟಪಾಡಿ ಕುಮಾರಸ್ವಾಮಿ

LEAVE A REPLY

Please enter your comment!
Please enter your name here