Home ಧಾರ್ಮಿಕ ಕಾರ್ಯಕ್ರಮ ಶ್ರೀಕೃಷ್ಣ ಮಠದಲ್ಲಿ ಭಾಗೀರಥಿ ಜಯಂತಿ

ಶ್ರೀಕೃಷ್ಣ ಮಠದಲ್ಲಿ ಭಾಗೀರಥಿ ಜಯಂತಿ

1686
0
SHARE

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಬುಧವಾರ ಭಾಗೀರಥಿ ಜಯಂತಿ ಹಾಗೂ ಪ್ರಸಕ್ತ ಸಾಲಿನ ಕೊನೆಯ ಬ್ರಹ್ಮರಥೋತ್ಸವ ಸೇವೆ ನಡೆಯಿತು.

ಮಧ್ವ ಸರೋವರದಲ್ಲಿನ ಭಾಗೀರಥಿ (ಗಂಗಾದೇವಿ) ಗುಡಿಯಲ್ಲಿ ಪ್ರತಿವರ್ಷ ಭಾಗೀರಥಿ ಜಯಂತಿ ಆಚರಿಸಲಾಗುತ್ತದೆ. ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಗಂಗೆಗೆ ಆರತಿಯೆತ್ತಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು, ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಗಳು ಉಪಸ್ಥಿತರಿದ್ದರು.

ಉತ್ಸವ ಮೂರ್ತಿ ಗರ್ಭಗುಡಿಗೆ:ಉಡುಪಿ ಕೃಷ್ಣನಿಗೆ ಮಳೆಗಾಲವನ್ನು ಹೊರತುಪಡಿಸಿ ಪ್ರತಿದಿನವೂ ರಥೋತ್ಸವ ನಡೆಯುತ್ತದೆ. ಮಳೆಗಾಲದಲ್ಲಿ ಕೃಷ್ಣನ ಉತ್ಸವ ಮೂರ್ತಿಯನ್ನು ಗರ್ಭಗುಡಿಗೆ ಸೇರಿಸ ಲಾಗುತ್ತದೆ. ಅದನ್ನು 5 ತಿಂಗಳ ಅನಂತರ ಉತ್ಥಾನ ದ್ವಾದಶಿಯಂದು ಹೊರಗೆ ತಂದು ನಿತ್ಯೋತ್ಸವ ಆರಂಭಿಸಲಾಗುತ್ತದೆ.

LEAVE A REPLY

Please enter your comment!
Please enter your name here