ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪ್ರಥಮನ ಏಕಾದಶಿಯ ಪೂರ್ವ ನಡೆಯುವ ವಾರ್ಷಿಕ ಮಹಾಭಿಷೇಕ ಗುರುವಾರ ಸಂಪನ್ನ ಗೊಂಡಿತು.
ಶ್ರೀಕೃಷ್ಣನಿಗೆ 1,108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕ ವನ್ನು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನೆರವೇರಿಸಿದರು. ಶುಕ್ರವಾರ ತಪ್ತಮುದ್ರಾಧಾರಣೆ ನಡೆಯಲಿದೆ.