Home ಧಾರ್ಮಿಕ ಸುದ್ದಿ ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ವೇಷಗಳ ಮೆರುಗು

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ವೇಷಗಳ ಮೆರುಗು

711
0
SHARE

ಉಡುಪಿ: ಕಡೆಗೋಲು ಹಿಡಿದ ಬಾಲಕೃಷ್ಣನ ನಾಡು ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಮಠದ ಸುತ್ತಲೂ ವ್ಯಾಪಾರದ ಭರಾಟೆಯೊಂದಿಗೆ ತಾಸೆ ಸದ್ದು ಕಿವಿಗಪ್ಪಳಿಸುತ್ತಿವೆ.

ತರಹೇವಾರಿ ವೇಷಗಳು
ಉಡುಪಿಯ ಕೃಷ್ಣಾಷ್ಟಮಿ ಅಂದರೆ ನೆನಪಾಗುವುದು ಬಣ್ಣ ಬಣ್ಣದ ವೇಷಗಳು ಆದರೆ ಈ ಬಾರಿ ವೇಷಗಳ ಸಂಖ್ಯೆ ಕಡಿಮೆ ಇದ್ದಂತೆ ಕಂಡು ಬಂದರೂ ವಿಭಿನ್ನ ಬಗೆಯ ವೇಷಗಳು ರಂಜಿಸಿದ್ದವು. ಸಹಾಯಧನಕ್ಕಾಗಿ ಕೆಲವು ವೇಷಗಳು ಮೀಸಲಾದರೆ, ಇನ್ನು ಕೆಲವು ವೇಷಗಳು ತಮ್ಮ ಸಂತೋಷಕ್ಕಾಗಿ ಭಾಗವಹಿಸಿದ್ದವು. ಅಮೇಝಿಂಗ್‌ ಮೊನಸ್ಟಾರ್‌, ಡ್ರಗ್ಸ್‌ ಕಾಕೋಟಕ, ಗ್ಲಾಡಿಯೇಟರ್‌, ಏಲಿಯನ್‌ ಡ್ರಾಗನ್‌ ಮೊದಲಾದ ವೇಷಗಳು ಹಾಲಿವುಡ್‌ ಉಡುಪಿಗೆ ಬಂದಂತಾಯಿತು.

ಚಿಣ್ಣರ ಹುಲಿವೇಷ
ಕೂಲಿ ಕೆಲಸಕ್ಕೆಂದು ಬಂದ ಉತ್ತರ ಕರ್ನಾಟಕ ಮೂಲದ ವಲಸೆ ಕುಟುಂಬದ ಮಕ್ಕಳು ಹುಲಿವೇಷ ಧರಿಸಿದ್ದು ವಿಶೇಷ ವಾಗಿತ್ತು. ಕಳೆದ ಮೂರು ವರ್ಷಗಳಿಂದ ಹುಲಿವೇಷ ಧರಿಸುತ್ತಿರುವ ಈ ಮಕ್ಕಳು ತಮಗೆ ಕೈಗೆಟಕುವ ವಸ್ತುಗಳನ್ನೇ ಬಳಸಿ ಹುಲಿವೇಷ ತಂಡ ಕಟ್ಟಿಕೊಂಡಿದ್ದಾರೆ. ಈ ತಂಡದಲ್ಲಿ ಬಾಗಲಕೋಟೆ, ವಿಜಯಪುರ, ಶಿವಮೊಗ್ಗ ಮೂಲದ 11 ಕಾರ್ಮಿಕ ಮಕ್ಕಳು
ವೇಷ ಧರಿಸಿ ಸಂಭ್ರಮಿಸುತ್ತಿದ್ದಾರೆ. ಬಳಸದೆ ಎಸೆದ ಡ್ರಮ್ಸ್‌, ಅಂಗಡಿಗಳಲ್ಲಿ ಸಿಗುವ ತಾಸೆ ಮೊದಲಾದ ಅಳಿದುಳಿದ ವಸ್ತುಗಳನ್ನು ಬಳಸಿಕೊಂಡು ವೇಷಧರಿಸಿ ಮನೆಗಳಿಗೆ ತೆರಳಿ ಕುಣಿತ ಪ್ರದರ್ಶಿಸುತ್ತಿ ದ್ದಾರೆ. ಹನುಮಂತನಗರ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿರುವ ಇವರು ಇಲ್ಲಿ ಸಂಗ್ರಹವಾದ ಹಣವನ್ನು ನಮ್ಮ ವಿದ್ಯಾ ಭ್ಯಾಸಕ್ಕೆ ಬಳಸಿಕೊಳ್ಳುತ್ತೇವೆ ಎನ್ನುತ್ತಾರೆ.

ವಿದ್ಯಾರ್ಥಿನಿಯರ ಹುಲಿವೇಷ
ಈ ಬಾರಿ ಜನ್ಮಾಷ್ಟಮಿಯ ವಿಶೇಷ ಆಕರ್ಷಣೆಯೆಂದರೆ ಕಡಿಯಾಳಿಯ ಅವಿಘ್ನ ವ್ಯಾಘ್ರಾಸ್‌ ವಿದ್ಯಾರ್ಥಿನಿಯರ ಹುಲಿವೇಷ ತಂಡ. ಯುಕೆಜಿಯಿಂದ ಎಂಜಿನಿಯರಿಂಗ್‌ ಕಲಿಯುತ್ತಿರುವ ವಿದ್ಯಾರ್ಥಿನಿಯರು ಹುಲಿಕುಣಿತ ನಡೆಸುತ್ತಿದ್ದು, ಒಟ್ಟು 32 ಕಡೆ ಪ್ರದರ್ಶನ ನೀಡಿದ್ದಾರೆ. ಒಂದು ಸದುದ್ದೇಶಕ್ಕಾಗಿ ಸಂಗ್ರಹವಾದ ಹಣವನ್ನು ಬಳಸುತ್ತಿದ್ದಾರೆ. ಇವರು ಕಡಿಯಾಳಿ ಗಣೇಶೋತ್ಸವ ಸಮಿತಿಯ ಆಸರೆ ಚಾರಿಟೆಬಲ್‌ ಟ್ರಸ್ಟ್‌ಗೆ ಸಂಗ್ರಹವಾದ ಹಣವನ್ನು ನೀಡುತ್ತಿದ್ದಾರೆ.

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಂಡದ ಊಟ ಉಪಾಹಾರ ಸೇರಿದಂತೆ ಎಲ್ಲವನ್ನು ಸಾರ್ವಜನಿಕರು ನೀಡಿದ್ದು, ಅಂದಾಜು 4 ಲ.ರೂ. ವರೆಗೆ ಸಂಗ್ರಹವಾಗಿದೆ. ವೇಷದ ಮತ್ತು ವಾಹನವೆಚ್ಚವನ್ನು ಕಳೆದು ಉಳಿಕೆ ಹಣವನ್ನು ಟ್ರಸ್ಟ್‌ಗೆ ವಿತರಣೆ ಮಾಡಲಾಗುವುದೆಂದು ಸಮಿತಿಯ ಪ್ರ.ಕಾರ್ಯದರ್ಶಿ, ಸಂಘಟಕ ರಾಘವೇಂದ್ರ ಕಿಣಿ ತಿಳಿಸಿದ್ದಾರೆ.

ಕಲಿತ ಶಾಲೆಯ ನೆರವಿಗೆ ರಾಮಾಂಜಿ ವೇಷ ಡ್ರಗ್ಸ್‌ ಕಾರ್ಕೋಟಕ ವೇಷದ ಮೂಲಕ ಜನ ಜಾಗೃತಿ ಮೂಡಿಸುವುದರೊಂದಿಗೆ ಕಲಿತ ಶಾಲೆಗೆ ಸಹಕಾರ ನೀಡಲು ಹೊರಟಿ ದ್ದಾನೆ ಉಡುಪಿಯ ರಾಮಾಂಜಿ. ಕಳೆದ ಆರು ವರ್ಷಗಳಿಂದ ರಾಮಾಂಜಿ ವೇಷ ಧರಿಸಿ ಸದುದ್ದೇಶಕ್ಕಾಗಿ ಬಳಸುತ್ತಿದ್ದು, ಈ ವರ್ಷ ಸಂಗ್ರಹವಾದ ಹಣದಲ್ಲಿ ಒಂದಂಶವನ್ನು ತಾನು ಕಲಿತ ಶಿರ್ವದ ವಿದ್ಯಾವರ್ಧಕ ಕನ್ನಡ ಮಾಧ್ಯಮ ಶಾಲೆಗೆ ನೀಡಲಿದ್ದಾರೆ. ಇನ್ನುಳಿದ ಹಣವನ್ನು ಉಡುಪಿಯ ಬಾಲಕಿ ಯರ ಪ್ರೌಢಶಾಲೆಯ ವಿಶೇಷ ಚೇತನ ವಿದ್ಯಾರ್ಥಿನಿ ಕಳತ್ತೂರಿನ ಸೌಂದರ್ಯಾ ಚಿಕಿತ್ಸೆಗೆ ಬಳಸಲಾಗುತ್ತದೆ.

LEAVE A REPLY

Please enter your comment!
Please enter your name here