Home ಧಾರ್ಮಿಕ ಸುದ್ದಿ ಭಗವಂತನ ನಿಯಾಮಕತ್ವದ ಅರಿವು ಪ್ರಯೋಗಸಾಧ್ಯ

ಭಗವಂತನ ನಿಯಾಮಕತ್ವದ ಅರಿವು ಪ್ರಯೋಗಸಾಧ್ಯ

ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪದಲ್ಲಿ ಪಲಿಮಾರು ಶ್ರೀಪಾದರು

1413
0
SHARE
ಶ್ರೀಕೃಷ್ಣಾಷ್ಟಮಿ ಉತ್ಸವದ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.

ಉಡುಪಿ: ಭಗವಂತನ ನಿಯಾಮಕತ್ವವನ್ನು ತಿಳಿಯುವುದೂ ಸಾಧ್ಯವಿದೆ ಎಂದು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಭಗವಂತನ ಈಶತ್ವ, ವರತ್ವ, ನಿಯಾಮಕತ್ವದ ಅರ್ಥವನ್ನು ಒಳಗೊಂಡಂತೆ ಕುಂತಿ ದೇವಿ ಪ್ರಾರ್ಥಿಸಿದ ಪರಿಣಾಮ ಶ್ರೀಕೃಷ್ಣ ಅವಳನ್ನು ಅನುಗ್ರಹಿಸಿದ. ಹೀಗೆ ಭಗವಂತ ಭಕ್ತಿಗೆ ಮಾತ್ರ ಒಲಿಯುವವ ಎಂದರು.

ಶ್ರೀಕೃಷ್ಣ ಎಲ್ಲರಲ್ಲಿದ್ದು ಅವರ ನಿಯಂತ್ರಣವನ್ನು ಯಾರಿಗೂ ತಿಳಿಯದಂತೆ ಮಾಡುವುದು ಅವನ ನಿಯಾಮಕತ್ವದ ನಿರೂಪಣೆ. ಆದರೂ ಆತ ಸದಾ ಆನಂದಮಯ. ಇದನ್ನು ಸಾಧಿಸಿ ನೋಡಬೇಕಾದರೆ ಶ್ರೀಕೃಷ್ಣ ಸರ್ವನಿಯಾಮಕತ್ವದ ಸಾಮರ್ಥ್ಯ ಉಳ್ಳವ ಎಂಬ ಅನುಸಂಧಾನದಲ್ಲಿ ನಿತ್ಯ ಸ್ಮರಣೆ ಮಾಡಬೇಕು. ಆಗಲೇ ಅದರ ಅನುಭವವಾಗುತ್ತದೆ ಎಂದರು.

ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಹಿರಿಯವೈದ್ಯ ಡಾ| ಎಸ್‌. ರಾಜಾ ಅತಿಥಿಗಳಾಗಿ ದ್ದರು. ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ಉಪನ್ಯಾಸ ನೀಡಿದರು. ಶ್ರೀಕೃಷ್ಣಾಷ್ಟಮಿ ಉತ್ಸವದ ಕಾರ್ಯಕರ್ತರನ್ನು ಅಭಿನಂದಿಸ ಲಾಯಿತು. ರಮೇಶ ಭಟ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here