ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬೆಂಗಳೂ ರಿನ ಬಸವನಗುಡಿಯ ಶ್ರೀ ಗೋವರ್ಧನ ಕ್ಷೇತ್ರದಲ್ಲಿ, ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಹಿರಿಯಡಕ ಪುತ್ತಿಗೆ ಮೂಲ ಮಠದಲ್ಲಿ ಆ. 1ರಿಂದ ಸೆ. 12ರ ವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ.
ವ್ರತಾಚರಣೆ ಅವಧಿಯಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನಾಗರ ಪಂಚಮಿ, ಶ್ರೀ ರಾಘವೇಂದ್ರ ಗುರುಗಳ ಆರಾಧನೆ, ಶ್ರೀಕೃಷ್ಣ ಜನ್ಮಾಷ್ಟಮಿ, ನೂಲ ಹುಣ್ಣಿಮೆ, ಗಣೇಶ ಚತುರ್ಥಿ, ಅನಂತನ ಚತುರ್ದಶಿ ಸೇರಿದಂತೆ ಹಲವು ಹಬ್ಬಗಳು, ಪ್ರಸಿದ್ಧ ವಿದ್ವಾಂಸರಿಂದ ಪ್ರವಚನಗಳು ನಡೆಯಲಿವೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ.