ಉಡುಪಿ: ಓಮಾನ್‌ನ ರಾಜಧಾನಿ ಮಸ್ಕತ್‌ನಲ್ಲಿರುವ ಶ್ರೀಕೃಷ್ಣಮಂದಿರದಲ್ಲಿ ಶುಕ್ರವಾರ ಆಂಜನೇಯ ಮತ್ತು ಮಧ್ವರ ವಿಗ್ರಹಗಳನ್ನು ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಶುಕ್ರವಾರ ಪಂಚಾಮೃತ ಅಭಿಷೇಕಾದಿಗಳನ್ನು ನಡೆಸಿ ಪ್ರತಿಷ್ಠಾಪನೆ ಮಾಡಿದರು.
ಆಶೀರ್ವಚನ ನೀಡಿದ ಸ್ವಾಮೀಜಿಯವರು, ಇಂದು ಮಸ್ಕತ್ ನಾಗರಿಕರಿಗೆ ಸುಯೋಗ. ಒಂದೇ ಮೂಲರೂಪದ ಎರಡು ಅವತಾರ ರೂಪಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದರಿಂದ ಸಕಲ ಸಜ್ಜನರ ಸಾಧನೆಗೆ ಅನುಕೂಲವಾಗಲಿದೆ ಎಂದರು.
ಪುತ್ತಿಗೆ ಮಠದ ವೈದಿಕರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸುಮಾರು 50 ಮಂದಿ ವಾಯುಸ್ತುತಿ ಪುರಶ್ಚರಣೆ ಮಾಡಿದರೆ, ಮಹಿಳೆಯರು ವಾದಿರಾಜಸ್ವಾಮಿಗಳು ರಚಿಸಿದ ಲಕ್ಷ್ಮೀಶೋಬಾನೆಯ ಪಾರಾಯಣ ಮಾಡಿದರು.