ಉಡುಪಿ : ತನ್ನ ಪರ್ಯಾಯೋತ್ಸವದ ಅಂತಿಮ ಚರಣದಲ್ಲಿರುವ ಶ್ರೀ ಪಲಿಮಾರು ಮಠದ ಸೇವಾರೂಪವಾಗಿ ಶ್ರೀ ಚಂದ್ರಮೌಳೀಶ್ವರ ಮತ್ತು ಶ್ರೀ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಗುರುವಾರ ಸೂರ್ಯೋದಯದಿಂದ ಶುಕ್ರವಾರ ಸೂರ್ಯೋದಯದವರೆಗೆ ರಾಶಿ ಪೂಜಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ಪ್ರತಿ ಎರಡು ತಾಸುಗಳಿಗೊಮ್ಮೆ ಒಂದೊಂದು ರಾಶಿಗೆ ವಿಶೇಷ ಪೂಜೆಯನ್ನು 24 ಗಂಟೆಗಳ ಅವಧಿಯಲ್ಲಿ ನಡೆಸಲಾಯಿತು. ಗುರುವಾರ ರಾತ್ರಿ ನಡೆದ ರಂಗಪೂಜಾ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿದ್ದರು.