Home ಧಾರ್ಮಿಕ ಸುದ್ದಿ ಶ್ರೀಕೃಷ್ಣಮಠ: ವ್ಯಾಸ-ದಾಸ- ವಿ”ಜಯ’ ಉತ್ಸವ ಆರಂಭ

ಶ್ರೀಕೃಷ್ಣಮಠ: ವ್ಯಾಸ-ದಾಸ- ವಿ”ಜಯ’ ಉತ್ಸವ ಆರಂಭ

906
0
SHARE

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯ, ಬೆಂಗಳೂರಿನ ನಿನ್ನಾ ಒಲುಮೆ ಯಿಂದ ಪ್ರತಿಷ್ಠಾನದ ಸಹಯೋಗದಲ್ಲಿ ತತ್ತ್ವ ಸಂಶೋಧನ ಸಂಸತ್‌ ಆಯೋಜಿಸಿರುವ ಸಮಗ್ರ ಮಹಾಭಾರತ ಸಮರ್ಪಣೋತ್ಸವ ಮತ್ತು ವ್ಯಾಸ-ದಾಸ ವಿ”ಜಯ’ ಉತ್ಸವ ಕಾರ್ಯಕ್ರಮವನ್ನು ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಬುಧವಾರ ರಾಜಾಂಗಣದಲ್ಲಿ ಉದ್ಘಾಟಿಸಿದರು.

ಮಧ್ವಾಚಾರ್ಯರು ಮಹಾಭಾರತ ಗ್ರಂಥದ ಸಂಶೋಧನೆಯನ್ನು ಮಾಡಿ “ತಾತ್ಪರ್ಯ ನಿರ್ಣಯ’ ಗ್ರಂಥದ ಮೂಲಕ ಆಧುನಿಕ ಸಂಶೋಧಕರಿಗೆ ಸಂಶೋಧನೆಯನ್ನು ಮಾಡುವ ಬಗೆಗೆ ಮಾರ್ಗದರ್ಶನ ನೀಡಿದವರು. ತಾಳೆಗರಿಯಲ್ಲಿರುವುದನ್ನೇ ಭಟ್ಟಿ ಇಳಿಸುವುದು ಸಂಶೋಧನೆಯಲ್ಲ.

“ಪಂಚಮವೇದ’ ಎಂದು ಹೇಳುವ ಮಹಾಭಾರತ ಗ್ರಂಥವಿಲ್ಲದೆ ಇರುತ್ತಿದ್ದರೆ ವೇದ-ವೇದಾಂತಕ್ಕೆ ಅರ್ಥ ಮಾಡುವುದು ಕಷ್ಟವಾಗುತ್ತಿತ್ತು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ತಣ್ತೀ ಸಂಶೋಧನ ಸಂಸತ್ತು ಅನೇಕ ಪ್ರಕಟನೆಗಳನ್ನು ಹೊರತಂದಿದೆ. ಸಂಶೋಧನೆಯನ್ನು ಮಾಡುವುದು ಎಷ್ಟು ಕಷ್ಟ ಎಂಬುದು ನಮಗೆ ಗೊತ್ತಿದೆ. 40 ವಿದ್ವಾಂಸರ ಪರಿಶ್ರಮದಿಂದ ಹೊರತರುವ ಈ ಸಂಪುಟದ ಶ್ರಮ ಅಭಿನಂದನೀಯ. ಸಂಸತ್ತು ಹೊರತಂದಿರುವ ಕೃತಿಗಳಲ್ಲಿ ಮಹಾಭಾರತ ಕೃತಿ ಶಿಖರಪ್ರಾಯ ವಾದುದು ಎಂದರು.

ಈ ಕಾರ್ಯಕ್ರಮವನ್ನು ವಿಜಯದಾಸರ ಆರಾಧನೆ ಸಮಯದಲ್ಲಿ ಆಯೋಜಿಸಿ ರುವುದೂ ಸ್ತುತ್ಯರ್ಹ. ವಿಜಯದಾಸರು ಸುಳಾದಿಗಳ ದಾಸರೆಂದೇ ಪ್ರಸಿದ್ಧಿ. ಸುಮಾರು 600 ಸುಳಾದಿಗಳು ಈಗ ಲಭ್ಯವಿವೆ. ಅಪರೋಕ್ಷಜ್ಞಾನಿಗಳು ಬರೆದ ಈ ಸುಳಾದಿಗಳು ನಶಿಸಿ ಹೋಗದಂತೆ ಉಳಿಸಿಕೊಳ್ಳುವುದೂ ನಮ್ಮ ಆದ್ಯ ಕರ್ತವ್ಯ ಎಂದರು.

ಪಲಿಮಾರು ಕಿರಿಯ ಶ್ರೀ ವಿದ್ಯಾ ರಾಜೇಶ್ವರತೀರ್ಥ ಶ್ರೀಪಾದರು ಹಾಗೂ ಪ್ರಯಾಗ ಮಠದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ತತ್ತ್ವ ಸಂಶೋಧನ ಸಂಸತ್ತಿನ ನಿರ್ದೇಶಕ ಡಾ| ವಂಶಿ ಕೃಷ್ಣ ಆಚಾರ್ಯ ಸ್ವಾಗತಿಸಿ, ಮೈಸೂರು ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here