Home ಧಾರ್ಮಿಕ ಸುದ್ದಿ ‘ಓಣಂ ಹಬ್ಬದ ಮೂಲಕ ಸಮಾಜ ಬೆಸೆಯುವ ಕೆಲಸ’

‘ಓಣಂ ಹಬ್ಬದ ಮೂಲಕ ಸಮಾಜ ಬೆಸೆಯುವ ಕೆಲಸ’

1187
0
SHARE

ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದು ಕೇರಳ ರಾಜ್ಯಕ್ಕೆ ಹೆಮ್ಮೆಯ ವಿಚಾರ. ಕೇರಳೀಯರು ಪ್ರಪಂಚದ ಯಾವುದೇ ಮೂಲೆಯಲ್ಲೂ ಕಾಣಸಿಗುತ್ತಾರೆ. ಧಾರ್ಮಿಕ, ದೇವಾಲಯಗಳ ನಾಡು ಕೂಡ ಹೌದು. ಓಣಂ ಹಬ್ಬದ ಮೂಲಕ ಸಮಾಜವನ್ನು ಬೆಸೆಯುವ ಕೆಲಸ ಆಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೇರಳ ಸಂಸ್ಕೃತಿ ಮತ್ತು ಸಮಾಜ ಕೇಂದ್ರದ ವತಿಯಿಂದ ಲಯನ್ಸ್‌ 317ಸಿ ಜಿಲ್ಲೆಯ ಸಹಯೋಗದೊಂದಿಗೆ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ನಡೆದ ಓಣಂ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಳುಹಾಸ್ಯ ನಟ ಅರವಿಂದ ಬೋಳಾರ್‌ ಮಾತನಾಡಿ, ಕೇರಳದವರು ವಿದ್ಯಾಭ್ಯಾಸದಲ್ಲಿ ಮುಂದುವರಿದಿದ್ದಾರೆ. ಪತ್ರಿಕೆಗಳನ್ನು ಓದಿ ಬೇರೆಯವರಿಗೆ ವಿಷಯಗಳನ್ನು ತಿಳಿಯಪಡಿಸುವಂತಹ ಕೆಲಸಗಳನ್ನು ಅವರು ಮಾಡುತ್ತಾರೆ. ಮಲಯಾಳಂ ಚಿತ್ರದಲ್ಲಿ ನಟನೆಗೆ ಅವಕಾಶ ಸಿಕ್ಕಿದ್ದು, ಶೀಘ್ರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಮಲಯಾಳಂ ಚಿತ್ರಗಳ ಹಾಸ್ಯದೃಶ್ಯಗಳು ಹಾಗೂ ತುಳು ಚಿತ್ರದ ಹಾಸ್ಯಸನ್ನಿವೇಶಗಳಿಗೆ ಸಾಮ್ಯತೆ ಇದೆ ಎಂದರು. ಬಳಿಕ ಕೆಲವು ತುಳು ಚಿತ್ರಗಳ ಡೈಲಾಗ್‌ಗಳನ್ನು ಹೇಳಿ ರಂಜಿಸಿದರು.

ಈ ಸಂದರ್ಭ ಅರವಿಂದ ಬೋಳಾರ್‌ ಅವರನ್ನು ಸಮ್ಮಾನಿಸಲಾಯಿತು. ಲಯನ್ಸ್‌ ಡಿಸ್ಟ್ರಿಕ್ಟ್ ಗವರ್ನರ್‌ ವಿ.ಜಿ ಶೆಟ್ಟಿ, ಪದ್ಮವಿಭೂಷಣ ಪ್ರಶಸ್ತಿ ವಿಜೇತ ಪ್ರೊ| ಡಾ| ಎಂ.ಎಸ್‌.ವಲಿಯತ್ತಾನ್‌, ಅಧ್ಯಕ್ಷ ಪಿ.ಎ.ಮೋಹನ್‌ದಾಸ್‌, ಸುಗುಣ ಕುಮಾರ್‌ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ವಿ.ಕುಮಾರ್‌ ವರದಿ ವಾಚಿಸಿದರು. ಮೋಹನದಾಸ್‌ ಪಿ. ಸ್ವಾಗತಿಸಿ, ಬಿಂದೂ ತಂಗಪ್ಪನ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here