Home ಧಾರ್ಮಿಕ ಸುದ್ದಿ ಉಡುಪಿ ನೆಲ್ಲಿಕಟ್ಟೆ ಶ್ರೀ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನ : ವಾರ್ಷಿಕ ನೇಮ

ಉಡುಪಿ ನೆಲ್ಲಿಕಟ್ಟೆ ಶ್ರೀ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನ : ವಾರ್ಷಿಕ ನೇಮ

247
0
SHARE

ಉಡುಪಿ: ಉಡುಪಿ ನೆಲ್ಲಿಕಟ್ಟೆ ಕ್ಷೇತ್ರ ಶ್ರೀ ಕಂಬಿಗಾರ, ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಫೆ. 23ರಂದು ನಡೆಯಿತು. ಬೆಳಗ್ಗೆ ದೈವಸ್ಥಾನದಲ್ಲಿ ಕೊಡವೂರು ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶುದ್ಧಕಲಶಾಭಿಷೇಕ, ಕಂಬಿಗಾರ ದೈವದ ದರ್ಶನ ಸೇವೆಯಾಗಿ ಶಿರಿಬೀಡು ಗದ್ದೆಯಲ್ಲಿ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ಸಾಯಂಕಾಲ ಶ್ರೀ ಕ್ಷೇತ್ರದಿಂದ ಭಂಡಾರ ಹೊರಟು, ಚಪ್ಪರ ಪ್ರವೇಶವಾಗಿ ರಾತ್ರಿ ಶ್ರೀ ಬಬ್ಬುಸ್ವಾಮಿ ಮತ್ತು ಶ್ರೀ ದೇವಿ ತನ್ನಿಮಾನಿಗ ನೇಮವು ಜರಗಿತು. ದೈವಸ್ಥಾನದ
ಅರ್ಚಕ, ಗುರಿಕಾರ ಪ್ರವೀನ್‌ ಆವರಿಗೆ ಸಮಿತಿಯ ವತಿಯಿಂದ ಪಾರ್ಟಿ ನೀಡಿ ಗೌರವಿಸಲಾಯಿತು.

ದೈವಸ್ಥಾನ ಸಮಿತಿಯ ಅಧ್ಯಕ್ಷ ಶೇಖರ್‌ ಜಿ. ಅಮೀನ್‌, ಕಾರ್ಯದರ್ಶಿ ಸಂತೋಷ್‌ ಕುಮಾರ್‌, ಮೂಡನಿಡಂಬೂರು ಸಾರ್ವಜನಿಕ ನಾಗಬ್ರಹ್ಮ ಸ್ಥಾನದ ಮೊಕ್ತೇಸರ ಪ್ರಶಾಂತ್‌ ಕುಮಾರ್‌, ರಘುರಾಮ ಶೆಟ್ಟಿ ನಾಗೇಶ್‌ ಅಮೀನ್‌, ದಿನೇಶ್‌ ಅಮೀನ್‌, ದಿನಕರ್‌ ನಾರಾಯಾಣ ಪೂಜಾರಿ, ಹರೀಶ್‌ ಕೆ., ಲಕ್ಷ್ಮಣ್‌, ಪ್ರವೀಣ್‌, ಸುಭಾಸ್‌, ಗಣೇಶ್‌, ಅಣ್ಣಪ್ಪ, ಬಾಲಕೃಷ್ಣ
ಶೆಟ್ಟಿ, ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಫೆ. 24ರಂದು ಬೆಳಗ್ಗೆ 10ಕ್ಕೆ ಶ್ರೀ ಧೂಮಾವತಿ ಬಂಟ ದೈವದ ನೇಮ, ಮಧ್ಯಾಹ್ನ 2ಕ್ಕೆ ಶ್ರೀ ಕೊರಗಜ್ಜ ದೈವದ ನೇಮವು ಜರಗಲಿರುವುದು.

LEAVE A REPLY

Please enter your comment!
Please enter your name here