Home ಧಾರ್ಮಿಕ ಸುದ್ದಿ ನರಕ ಚತುರ್ದಶಿ: ತೈಲಾಭ್ಯಂಗ

ನರಕ ಚತುರ್ದಶಿ: ತೈಲಾಭ್ಯಂಗ

486
0
SHARE

ಉಡುಪಿ: ನರಕ ಚತುರ್ದಶಿ ಅಂಗವಾಗಿ ರವಿವಾರ ಮುಂಜಾವ ಎಣ್ಣೆ ಶಾಸ್ತ್ರವನ್ನು ಮಾಡಿದ ಬಳಿಕ ಬಿಸಿನೀರಿನಿಂದ ಸ್ನಾನ ಮಾಡಲಾಯಿತು. ಇದು ಮನೆಮನೆಗಳಲ್ಲಿಯೂ ನಡೆಯಿತು.

ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಶ್ರೀವಿದ್ಯಾ ರಾಜೇಶ್ವರ ತೀರ್ಥರು, ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥರು, ಶ್ರೀಪ್ರಯಾಗ ಮಠದ ಶ್ರೀವಿದ್ಯಾತ್ಮತೀರ್ಥರು ಪಾಲ್ಗೊಂಡಿದ್ದರು. ಪರ್ಯಾಯ ಮಠದಿಂದ ಎಲ್ಲ ಸ್ವಾಮೀಜಿಯವರಿಗೆ ಎಣ್ಣೆ ಶಾಸ್ತ್ರ ಮಾಡಿದ ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡಿದರು. ಇದೇ ವೇಳೆ ದೇವರಿಗೆ ಸಮರ್ಪಿಸಿದ ತೈಲವನ್ನು ಭಕ್ತರಿಗೂ ವಿತರಿಸಲಾಯಿತು.

ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರತೀರ್ಥರು, ಶ್ರೀಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ಅದಮಾರು ಮಠದಲ್ಲಿ ತೈಲಾಭ್ಯಂಗ ನಡೆಸಿದರು.
ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥರು, ಶ್ರೀವಿಶ್ವಪ್ರಸನ್ನ ತೀರ್ಥರು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ದೀಪಾವಳಿ ಆಚರಿಸಿ ದರು.

ಹಿರಿಯ ಶ್ರೀಗಳು ಶಿಷ್ಯರಿಗೆ ಎಣ್ಣೆಶಾಸ್ತ್ರ ಮಾಡಿದರು. ಹಿರಿಯ ಶ್ರೀಗಳು ಪರ್ಯಾಯದ ಅವಧಿ ಹೊರತುಪಡಿಸಿದರೆ ಪ್ರತಿ ವರ್ಷವೂ ವಿದ್ಯಾಪೀಠದ ವಿದ್ಯಾರ್ಥಿಗಳ ಜತೆಯಲ್ಲಿಯೇ ದೀಪಾವಳಿ ಆಚರಿಸು ವುದು ವಾಡಿಕೆ. ಹೋದ ವರ್ಷ ಸ್ವಾಮೀಜಿಯವರಿಗೆ ಗೊತ್ತಿಲ್ಲದೆ ಇನ್ನೊಂದು ಕಾರ್ಯಕ್ರಮ ನಿಗದಿಯಾದ ಕಾರಣ ಎರಡು ದಿನ ಬಿಟ್ಟು ಬಂದು ಮತ್ತೆ ವಿದ್ಯಾರ್ಥಿಗಳೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.

LEAVE A REPLY

Please enter your comment!
Please enter your name here