ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಇದರ ವತಿಯಿಂದ ಕಂಡೊಡೊಂಜಿ ದಿನ ಕಾರ್ಯಕ್ರಮವನ್ನು ಜು.1ರಂದು ಕಂಬಳ ಮನೆ ಗದ್ದೆಯಲ್ಲಿ ಪ್ರಗತಿಪರ ಕೃಷಿಕ ಮಧುಸೂದನ ಭಟ್ ಉದ್ಘಾಟಿಸಿದರು. ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸುರೇಶ ದೇವಾಡಿಗ ಅಧ್ಯಕ್ಷತೆ ವಹಿಸಿದರು. ಪಗತಿಪರ ಕೃಷಿಕರಾದ ಸುಶೀಲಾ ಶೆಡ್ತಿ ಮಾರ್ಪಳ್ಳಿ , ಶಾರದ ಶೇರಿಗಾರ್ ಮಾರ್ಪಳ್ಳಿ, ಕೂಸು ಪೂಜಾರಿ¤ ಮಾರ್ಪಳ್ಳಿ ,ರತ್ನಾ ಬಾಯಿ ನಾಯ್ಕ ಮಾರ್ಪಳ್ಳಿ , ಮುತ್ತು ಮಾರ್ಪಳ್ಳಿ ಇವರನ್ನು ಸಮ್ಮಾನಿಸಲಾಯಿತು. ಕೆಸರುಗದ್ದೆ ಓಟ, ವಾಲಿಬಾಲ್, ತ್ರೋಬಾಲ್ ತೆಂಗಿಕಾಯಿ ಕೆಸರಲ್ಲಿ ಹುಡುಕುವುದು, ಹಗ್ಗಾ ಜಗ್ಗಾಟ ಇನ್ನಿತರ ಕೆಸರುಗದ್ದೆ ಸ್ಪರ್ಧೆ ನಡೆಯಿತು.
ಬೇಬಿ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ಗರೋಡಿಮನೆ ಮಹಾಬಲ ಪೂಜಾರಿ ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಸದಾಶಿವ ಶೆಟ್ಟಿ , ಶ್ರೀ ಮಹಾಲಿಂಗೇಶ್ವರ ಚೆಂಡೆ ಬಳಗ ಅಧ್ಯಕ್ಷ ವೇದವ್ಯಾಸ ತಂತ್ರಿ, ನಂದಗೋಕುಲ ಯುವಕ ಮಂಡಲದ ಅಧ್ಯಕ್ಷ ಹರೀಶ್ ಎಂ., ನಂದಗೋಕುಲ ಮಹಿಳಾ ಮಂಡಳಿ ಅಧ್ಯಕ್ಷೆ ಅಂಜಲಿ ಭಟ್, ಮಾರ್ಪಳ್ಳಿ ಗೆಳೆಯರ ಬಳಗದ ಅಧ್ಯಕ್ಷ ಪಾಂಡುರಂಗ ನಾಯಕ್, ಗೆಳೆಯರ ಬಳಗ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಮೀಳಾ ಎಸ್. ಶೆಟ್ಟಿಗಾರ್ ಉಪಸ್ಥಿತರಿದ್ದರು. ಗಣೇಶ ದೇವಾಡಿಗ ಸ್ವಾಗತಿಸಿ. ಕಾರ್ಯಕ್ರಮ ನಿರೂಪಿಸಿದರು.