Home ಧಾರ್ಮಿಕ ಸುದ್ದಿ ತಾಳಹಿಡಿದು ಭಜನೆ ಹಾಡಿದ ಶ್ರೀಗಳು

ತಾಳಹಿಡಿದು ಭಜನೆ ಹಾಡಿದ ಶ್ರೀಗಳು

1434
0
SHARE

ಉಡುಪಿ: ಮಧ್ವಜಯಂತಿ ಪ್ರಯುಕ್ತ ವಿವಿಧ ಮಠಾಧೀಶರು ಮಂಗಳವಾರ ರಾತ್ರಿ ಅಖಂಡ ಭಜನೆ ನಡೆಯುವಲ್ಲಿ ಸುಮಾರು ಒಂದು ಗಂಟೆ ಕಾಲ ಭಜನೆಗಳನ್ನು ಹಾಡಿದರು.

ದಾಸವರೇಣ್ಯರ ಎಂಟು ಹಾಡು ಗಳನ್ನು ಹಾಡಲಾಯಿತು. ಶ್ರೀಅದಮಾರು ಮಠದ ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಮುಖ್ಯವಾಗಿ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿದರೆ ಶ್ರೀಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಖಂಜಿರ ನುಡಿಸಿದರು.

ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀಪಲಿಮಾರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ತಾಳ ಹಾಕಿ ಭಜನೆಗೆ ದನಿಗೂಡಿಸಿದರು.

2018ರ ಜ. 18ರ ಬೆಳಗ್ಗೆ ಶ್ರೀಪಲಿಮಾರು ಮಠದ ಶ್ರೀವಿದ್ಯಾ ಧೀಶತೀರ್ಥ ಶ್ರೀಪಾದರು ಪರ್ಯಾಯ ಪೂಜೆಯನ್ನು ಆರಂಭಿಸುವಾಗ ಆರಂಭವಾದ ಅಖಂಡ ಭಜನೆ ಇದುವರೆಗೂ ನಿರಂತರವಾಗಿ ನಡೆಯುತ್ತಿದ್ದು ಇನ್ನೂ ನೂರು ದಿನಗಳ ಕಾಲ ನಡೆಯಲಿದೆ.

2020ರ ಜ. 17ರ ಮಧ್ಯರಾತ್ರಿ ವರೆಗೆ ಅಖಂಡ ಭಜನೆ ನಡೆಯಲಿದೆ. ಇದುವರೆಗೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಭಜನಾ ಮಂಡಳಿಗಳ ಸದಸ್ಯರು ಆಗಮಿಸಿ ಭಜನೆಗಳನ್ನು ಹಾಡಿದರೆ ಮಂಗಳವಾರ ರಾತ್ರಿ ಸ್ವಾಮೀಜಿಯವರೇ ಭಜನೆಗಳನ್ನು ಹಾಡಿದರು.

LEAVE A REPLY

Please enter your comment!
Please enter your name here