Home ಧಾರ್ಮಿಕ ಸುದ್ದಿ ಕೃಷ್ಣ ವೇಷ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

ಕೃಷ್ಣ ವೇಷ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

1288
0
SHARE

ಉಡುಪಿ : ಗರ್ಭ ಗುಡಿಯೊಳಗಿಂದ ಒಂದು ರೂಪದಿಂದ ಕೃಷ್ಣನನ್ನು ನೋಡಿದರೆ ಇಂದು ರಾಜಾಂಗಣದಲ್ಲಿ ಸಾವಿರ ರೂಪದಿಂದ ಕೃಷ್ಣರನ್ನು ನೋಡಬಹುದು. ಆಧ್ಯಾತ್ಮ ಪೀಠ, ವಿಜ್ಞಾನ ಪೀಠ,ರಾಜಕೀಯ ಪೀಠ 3 ಪೀಠಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನಡೆಯುತ್ತಿದೆ. ಆರೋಗ್ಯ ಮತ್ತು ವಿದ್ಯೆ ಬಹಳ ಮುಖ್ಯವಾದದ್ದು, ಇದಕ್ಕೆ ಸರಕಾರದೊಂದಿಗೆ ಮಠಗಳು ಮಂದಿರಗಳು, ಸಾರ್ವಜನಿಕವಾಗಿ ಕೈ ಜೋಡಿಸಿದಾಗ ಉತ್ತಮ ಗುಣಮಟ್ಟ ಕೊಡಲು ಸಾಧ್ಯ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ವಿದ್ಯಾಧೀಶ ತೀರ್ಥಶ್ರೀಪಾದರು ನುಡಿದರು.

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಚಿಣ್ಣರ ಸಂತರ್ಪಣೆಯ ಶಾಲೆಗಳಲ್ಲಿ ನಡೆದ ಶ್ರೀ ಕೃಷ್ಣವೇಷ ಸ್ಪರ್ಧೆಯ ವಿಜೇತ ಮಕ್ಕಳಿಗೆ ಶನಿವಾರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪಲಿಮಾರು ಶ್ರೀಗಳು ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಸಮ್ಮಾನಿಸಿದರು. ಇಸ್ರೋದ ಸಹಾಯಕ ನಿರ್ದೇಶಕ ಡಾ| ಎಸ್‌. ವಿ.ಶರ್ಮ ಮಾತನಾಡಿ, ಇಸ್ರೋ ಪ್ರಪಂಚದಲ್ಲಿಯೇ ಮುಂದುವರಿಯಲು ವಿದ್ಯೆ ಕಾರಣ. ಈ ಬಾರಿಯ ಚಂದ್ರಯಾನ-2 ಶೇ.98ರಷ್ಟು ಯಶಸ್ವಿಯಾಗಿದೆ. 2021ರಲ್ಲಿ ಗಗನಯಾನ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.

ಪಲಿಮಾರು ಕಿರಿಯಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಕೆ.ರಘುಪತಿ ಭಟ್‌, ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ ಉಪಸ್ಥಿತರಿದ್ದರು. ಪರ್ಯಾಯ ಮಠದ ದಿವಾನರಾದ ವಿದ್ವಾನ್‌
ವೇದವ್ಯಾಸ ತಂತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚಿಣ್ಣರ ಸಂತರ್ಪಣೆಯ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ ರಾವ್‌ ವಂದಿಸಿದರು. ಅನಂತ ಕುಮಾರ್‌ ಶೆಟ್ಟಿ ನಿರೂಪಿಸಿದರು

LEAVE A REPLY

Please enter your comment!
Please enter your name here