ಉಡುಪಿ : ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇಗುಲದಲ್ಲಿ ಸೆ. 29ರಿಂದ ಅ. 7ರ ತನಕ ವೇ| ಮೂ| ಪುತ್ತೂರು ಶ್ರೀಶ ತಂತ್ರಿ ಅವರ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವ ನಡೆಯಲಿದೆ.
ಸೆ. 29ರ ಬೆಳಗ್ಗೆ 7.30ಕ್ಕೆ ಕದಿರು ಕಟ್ಟುವುದು, ಸಂಜೆ 6ಕ್ಕೆ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರವೀಣ್ ಬಿ. ನಾಯಕ್ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಕನ್ನರ್ಪಾಡಿ-ಕಿನ್ನಿಮೂಲ್ಕಿ ಬ್ರಾಹ್ಮಣ ಸಭಾ ಅಧ್ಯಕ್ಷ ರಮಾಕಾಂತ್ ಭಟ್, ಸರಕಾರದ ಕಾರ್ಯದರ್ಶಿ (ಲೋ.ಇ.), ಕಾರ್ಯಾಧ್ಯಕ್ಷ ಟಿ. ಸುಕುಮಾರ್, ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಮುರಳೀಧರ್ ಬಲ್ಲಾಳ್ ಭಾಗವಹಿಸಲಿದ್ದಾರೆ.
ಪ್ರತಿದಿನ ಬೆಳಗ್ಗೆ 8ರಿಂದ ಕಲ್ಪೋಕ್ತ ಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋ ತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ ನಡೆಯಲಿದ್ದು, ಸೆ. 3ರಿಂದ ಸೆ. 7ರ ತನಕ ಮಧ್ಯಾಹ್ನ ಚಂಡಿಕಾ ಯಾಗ, ಮಹಾಪೂಜೆ, ಸೆ. 5ರಂದು ಶಾರಾದಾ ಪೂಜೆ ಆರಂಭ, ಸೆ. 7ರಂದು ಚಂಡಿಕಾ ಯಾಗ, ಮಹಾ ಅನ್ನಸಂತರ್ಪಣೆ, ಸೆ. 8ರಂದು ಶಾರದಾ ವಿಸರ್ಜನೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.