Home ಧಾರ್ಮಿಕ ಕಾರ್ಯಕ್ರಮ ನೂತನ ಆಲಯ ಸಮರ್ಪಣೆ, ಪುನಃಪ್ರತಿಷ್ಠೆ

ನೂತನ ಆಲಯ ಸಮರ್ಪಣೆ, ಪುನಃಪ್ರತಿಷ್ಠೆ

ಕಲ್ಯಾಣಪುರ ಶ್ರೀ ಬಾಲಮಾರುತಿ ವ್ಯಾಯಾಯ ಶಾಲೆ

1288
0
SHARE

ಉಡುಪಿ: ಕಲ್ಯಾಣಪುರ ಶ್ರೀ ಬಾಲ ಮಾರುತಿ ವ್ಯಾಯಾಮ ಶಾಲೆ ಇದರ ನೂತನ ಆಲಯ ಸಮರ್ಪಣೆ ಪುನಃಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ , ಬ್ರಹ್ಮ ಕುಂಭಾಭಿಷೇಕ, ವಾರ್ಷಿಕ ಸಮಾರಂಭದ ಅನ್ನಸಂತರ್ಪಣೆ ಪ್ರಯಕ್ತ ನಡೆದ ಹೊರೆಕಾಣಿಕೆ ಮೆರವಣಿಗೆಗೆ ಜೂ. 4ರಂದು ಉಡುಪಿ ಕಲ್ಯಾಣಪುರ ಶ್ರೀ ವೀರಭದ್ರ ದೇವಸ್ಥಾನದಲ್ಲಿ ದೇವಸ್ಥಾನದ ಧರ್ಮದರ್ಶಿ ಜ್ಯೋತಿಪ್ರಸಾದ ವಿ. ಶೆಟ್ಟಿಗಾರ ಚಾಲನೆ ನೀಡಿದರು.

ಹೊರೆಕಾಣಿಕೆ ಮೆರವಣಿಗೆಯಲ್ಲಿ ಚೆಂಡೆ, ಬ್ಯಾಂಡ್‌, ಡೊಳ್ಳು , ಸ್ತಬ್ಧಚಿತ್ರ, ತಾಲೀಮು, ತಟ್ಟಿರಾಯ, ಕೊಂಬು ವಾದ್ಯದೊಂದಿಗೆ ವ್ಯಾಯಾಮ ಶಾಲೆಗೆ ತಲುಪಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶ್‌ಪಾಲ ಸುವರ್ಣ, ಕಾರ್ಯಾಧ್ಯಕ್ಷ ಕೃಷ್ಣ ದೇವಾಡಿಗ, ಗೌರವ ಅಧ್ಯಕ್ಷ ರಮೇಶ್‌ ಕುಂದರ್‌, ಪ್ರದಾನ ಕಾರ್ಯದರ್ಶಿ ಗಣೇಶ್‌ ಶೇರಿಗಾರ್‌ಮತ್ತು ಎಲ್ಲ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here