ಉಡುಪಿ: ದೇವರು ಸರ್ವ ಜ್ಞಾನಿ, ಸರ್ವ ವ್ಯಾಪಿ. ಅವರನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ದೇವಮಂದಿರದಲ್ಲಿ ಮಾತ್ರವಲ್ಲ ಭಕ್ತರ ಮನೆಯಲ್ಲೂ ನೆಲೆಸಬಹುದು. ದೇವರನ್ನು ಬಿಟ್ಟು ಭಕ್ತನಿಲ್ಲ, ಭಕ್ತನನ್ನು ಬಿಟ್ಟು ದೇವರಿಲ್ಲ. ಬಾಲ ಮಾರುತಿಗೆ ಇಡಿ ಭೂಮಂಡಲದ ಭಕ್ತರನ್ನು ರಕ್ಷಿಸುವ , ಸಮಾಜಘಾತುಕರನ್ನು ಸಂಹಾರ ಮಾಡುವ ಶಕ್ತಿ ಇದೆ , ಅದೇ ರೀತಿ ನಮ್ಮ ಯುವ ಜನಾಂಗದಲ್ಲಿ ಸಮಾಜದ ಅಭಿವೃದ್ಧಿ ಮಾಡುವ, ರಕ್ಷಿಸುವ ಶಕ್ತಿ , ಉತ್ತಮ ಸಂಸ್ಕಾರ ಕೂಡ ಇದೆ. ಇದನ್ನು ಬಳಸಿಕೊಂಡರೆ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ಸಾಧ್ಯ ಎಂದು ಕಲ್ಯಾಣಪುರ ಮೌಂಟ್ ರೋಜರಿ ಚರ್ಚ್ನ ಧರ್ಮಗುರು ಲೆಸ್ಲಿ ಡಿ’ಸೋಜ ಹೇಳಿದರು.
ಜೂ.7ರಂದು ಕಲ್ಯಾಣಪುರ ಶ್ರೀ ಬಾಲ ಮಾರುತಿ ವ್ಯಾಯಾಮ ಶಾಲೆ ಇದರ ನೂತನ ಆಲಯ ಸಮರ್ಪಣೆ, ಪುನಃ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮ ಕುಂಬಾಭಿಷೇಕ, ವಾರ್ಷಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವೇ| ಮೂ| ಕಾಶಿನಾಥ್ ಭಟ್, ನ್ಯಾಯವಾದಿ ಸುಪ್ರಸಾದ ಶೆಟ್ಟಿ , ಉದ್ಯಮಿಗಳಾದ ಬ್ಯಾಪ್ಟಿಸ್ ಡಾಯಸ್ , ದಿನೇಶ ಜತ್ತನ್, ಸ್ಟೀಫನ್ ಫೆರ್ನಾಂಡಿಸ್, ಹರೀಶ್ ನಿಡಂಬಳ್ಳಿ, ಸುಬ್ಬಣ್ಣ ಪೈ, ಎಡ್ವರ್ಡ್ ಲೂವಿಸ್, ಪತ್ರಕರ್ತ ಶ್ರೀಕಾಂತ್ ಶೆಟ್ಟಿ , ಕರಾವಳಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಮೇಶ ಶೆಟ್ಟಿ , ಡಾ| ಟಿ.ಎಂ.ಎ. ಪೈ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಶೆಟ್ಟಿ, ಬೊಬ್ಬರ್ಯ ದೈವಸ್ಥಾನದ ಅಧ್ಯಕ್ಷ ಪ್ರಕಾಶ ಪೂಜಾರಿ, ಕಲಾಣಪುರ ಗ್ರಾ. ಪಂ. ಸದಸ್ಯೆ ಇಂದುಮತಿ ಮಲ್ಯ, ಶ್ರೀ ಬಾಲ ಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಕೃಷ್ಣ ದೇವಾಡಿಗ, ಗೌರವ ಅಧ್ಯಕ್ಷ ರಮೇಶ ತಿಂಗಳಾಯ, ಕೋಶಾಧಿಕಾರಿ ಉಮೇಶ ತಿಂಗಳಾಯ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗಣೇಶ ಶೇರಿಗಾರ್ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.