Home ಧಾರ್ಮಿಕ ಸುದ್ದಿ ಪಂಚಭಾಷೆಗಳಲ್ಲಿ ಭಾಗವತ ಮೊಬೈಲ್ ಆ್ಯಪ್‌ ಉದ್ಘಾಟನೆ

ಪಂಚಭಾಷೆಗಳಲ್ಲಿ ಭಾಗವತ ಮೊಬೈಲ್ ಆ್ಯಪ್‌ ಉದ್ಘಾಟನೆ

1773
0
SHARE

ಉಡುಪಿ: ಶ್ರೀ ಮದ್ಭಾಗವತದ ಶ್ರವಣ-ಅಧ್ಯಯನಗಳು ನಮ್ಮ ಎಲ್ಲ ಇಹ-ಪರ ದುಃಖಗಳನ್ನು ಪರಿಹರಿಸು ವಂಥಹದ್ದು. ಅದರ ಅಧ್ಯಯನವನ್ನು ಎಲ್ಲರೂ ಅವಶ್ಯವಾಗಿ ಮಾಡಬೇಕು. ಇದಕ್ಕೆ ಅನುಕೂಲವಾಗಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರವು ಐದು ಭಾಷೆಗಳಲ್ಲಿ ಭಾಗವತದ ಅಪ್ಲಿಕೇಶನನ್ನು ಸಿದ್ಧಪಡಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಂಸ್ಕೃತ ಮಹಾಪಾಠಶಾಲೆಯ ಸಂಶೋಧನಾ ಕೇಂದ್ರದ ಸಮಾರಂಭದಲ್ಲಿ ಪಂಚಭಾಷೆಗಳಲ್ಲಿ ಭಾಗವತ ಮೊಬೈಲ್ ಆ್ಯಪ್‌ನ್ನು ಉದ್ಘಾಟಿಸಿ ಅವರು ಆಶೀರ್ವಚಿಸಿದರು. ಸಂಶೋಧನ ಕೇಂದ್ರದ ನಿರ್ದೇಶಕ ಡಾ| ಕಡಂದಲೆ ಗಣಪತಿ ಭಟ್ ವಿವರಣೆಯನ್ನು ನೀಡಿದರು.

LEAVE A REPLY

Please enter your comment!
Please enter your name here